ಕುಂಬಳೆ: ಕುಂಬಳೆ ಮಾಟಂಗುಳಿ ವಾರ್ಡ್ ಕಳೆದ ಕೆಲವು ವರ್ಷಗಳಿಂದ ಅಭಿವ್ರದ್ದಿಯಲ್ಲಿ ಹಿಂದುಳಿದಿದ್ದು ಎಡರಂಗದ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದರೆ, ಸದಸ್ಯನಾಗಿ ತನಗೆ ಸಿಗುವ ಎಲ್ಲಾ ಸಂಬಳ ಮತ್ತು ಸವಲತ್ತುಗಳನ್ನು ವಾರ್ಡ್‌ನ ಬಡ ರೋಗಿಗಳಿಗೆ ಖರ್ಚು ಮಾಡಲಾಗುವುದು ಎಂದು ಸಂಬಂಧಪಟ್ಟವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕುಂಬಳೆ ಮಾಟಂಗುಳಿ ವಾರ್ಡ್‌ನಿಂದ ಸ್ಪರ್ಧಿಸುತ್ತಿರುವ ಸಿಪಿಎಂ ಸ್ವತಂತ್ರ ಅಭ್ಯರ್ಥಿ ಹನೀಫ್ ಕುಂಟಂಗೇರಡ್ಕ ಅವರು ಈ ಘೋಷಣೆ ಮಾಡಿದ್ದಾರೆ.
ವಾರ್ಡ್‌ನಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ. ಕಳೆದ ಬಾರಿ
ಸಿಪಿಎಂ
ಎರಡನೇ ಸ್ಥಾನದಲ್ಲಿತ್ತು.ಈ ಬಾರಿ ಎಡರಂಗ ಬೆಂಬಲಿತ ಅಭ್ಯರ್ಥಿ ಬಹುಮತದಿಂದ ಗೆಲುವು
ಪಡೆಯುವರು.ಹನೀಫ್ ಅವರು ಗೆದ್ದ ಬಳಿಕ ಕ್ಯೆಗೊಳ್ಳುವ ಅಭಿವ್ರದ್ದಿ ಯೋಜನೆಯ ಬಗ್ಗೆ
ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದರು.ವಾರ್ಡ್
ವ್ಯಾಪ್ತಿಯ 30 ಕೇಂದ್ರಗಳಲ್ಲಿ ಸೌರ ಬೀದಿ ದೀಪಗಳನ್ನು ಅಳವಡಿಸಲಾಗುವುದು. ಇದಕ್ಕಾಗಿ
ಕೊಯಮತ್ತೂರಿನ ಖಾಸಗಿ ಕಂಪನಿಯನ್ನು ಸಂಪರ್ಕಿಸಿದ್ದೇವೆ ಎಂದು ಅಭ್ಯರ್ಥಿಯ ಚುನಾವಣೆಯ
ಉಸ್ತುವಾರಿ ನಾಯಕರು ತಿಳಿಸಿದ್ದಾರೆ. ಕುಂಬಳೆ ಸಮುದಾಯ ಆರೋಗ್ಯ ಕೇಂದ್ರವನ್ನು ಬ್ಲಾಕ್
ಪಂಚಾಯತ್ ಸಹಾಯದಿಂದ ಆಧುನೀಕರಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ವೆಲ್ಫೇರ್
ಎಲ್ಪಿ ಶಾಲೆಯ ಮೂಲಸೌಕರ್ಯವನ್ನು ಹೆಚ್ಚಿಸಿ ಗರಿಷ್ಠ ಸಂಖ್ಯೆಯ ಮಕ್ಕಳನ್ನು ಶಾಲೆಗೆ
ಆಕರ್ಷಿಸುವ ಕ್ರಮ ಕ್ಯೆಗೊಳ್ಳಲಾಗುವುದು ಎಂದರು. ವಾರ್ಡ್‌ನಲ್ಲಿ ಅಸ್ತಿತ್ವದಲ್ಲಿರುವ
ಎರಡು ಗ್ರಂಥಾಲಯಗಳನ್ನು ನವೀಕರಿಸಲಾಗುವುದು ಮತ್ತು ಮೂರು ಹೊಸ ಗ್ರಂಥಾಲಯಗಳನ್ನು
ಸ್ಥಾಪಿಸಲಾಗುವುದು. ಈ ಸ್ಥಳಗಳಲ್ಲಿ ಆನ್‌ಲೈನ್ ಅಧ್ಯಯನಕ್ಕೆ ಸೌಲಭ್ಯಗಳನ್ನು
ಒದಗಿಸಲಾಗುವುದು.
ವಸತಿ ಪ್ರದೇಶಗಳ ಪ್ಲಾಸ್ಟಿಕ್ ಮತ್ತು ಸಾವಯವ ತ್ಯಾಜ್ಯವನ್ನು ಬೇರ್ಪಡಿಸಲು ಮತ್ತು
ಸಂಗ್ರಹಿಸಲು ಮತ್ತು ಅದನ್ನು ವಿಲೇವಾರಿ ಮಾಡಲು ಯೋಜನೆಗಳು ಜಾರಿಗೊಳಿಸಲಾಗುವುದು. ಸಾವಯವ
ತ್ಯಾಜ್ಯವನ್ನು ಮಿಶ್ರಗೊಬ್ಬರ ಮಾಡುವ ವ್ಯವಸ್ಥೆಗಳನ್ನು ಪ್ರತಿ ಮನೆಗಳಿಗೂ
ಸ್ಥಾಪಿಸಲಾಗುವುದು. ವಾರ್ಡ್‌ನಲ್ಲಿ ಮಕ್ಕಳಿಗಾಗಿ ಉದ್ಯಾನವನವನ್ನು
ಪ್ರಾರಂಭಿಸಲಾಗುವುದು. ಅರ್ಹರಿಗೆ ಪಿಂಚಣಿ ಲಭ್ಯವಾಗಲಿದೆ ಎಂದು ನಾಯಕರು ವಿವರಿಸಿದರು.
ಇತರ ವಾರ್ಡ್‌ಗಳಲ್ಲಿನ ಅನೇಕ ನಿವಾಸಿಗಳು 21 ನೇ ವಾರ್ಡ್‌ನಲ್ಲಿ ಮತ
ಚಲಾಯಿಸಿದ್ದಾರೆ. ಮತ್ತು ಚುನಾವಣಾ ಫಲಿತಾಂಶವು ವಿರುದ್ಧವಾಗಿದ್ದರೆ ಅದರ ವಿರುದ್ಧ ಕ್ರಮ
ಕೈಗೊಳ್ಳುವುದಾಗಿ ನಾಯಕರು ಹೇಳಿದ್ದಾರೆ.
ವಾರ್ಡ್‌ನ ಮುಖ್ಯ ಚುನಾವಣಾ ಏಜೆಂಟ್ ನ್ಯಾಯವಾದಿ. ಉದಯಕುಮಾರ್, ಮುನೀರ್,
ಇರ್ಷಾದ್ ಚಾಕೊ ಮತ್ತು ಜಾಫರ್ ಪತ್ರಿಕಾಗೋಷ್ಠಿಗೆ ಅಭ್ಯರ್ಥಿಯೊಂದಿಗೆ ಉಪಸ್ಥಿತರಿದ್ದರು.