ಕುಂಬಳೆ. ಇಂದು ಸಂಜೆ 6 ಗಂಟೆಗೆ ಆರಿಕ್ಕಾಡಿ ಐರಿಸ್ ನೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕುಂಬಳ ಸ್ಕೈಲರ್ ಸೌಹಾರ್ದ ಫುಟ್ಬಾಲ್ ಪಂದ್ಯದ ಜರ್ಸಿಯನ್ನು ಇಂದು ಕುಂಬಳೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಕುಂಬಳೆ ಪ್ರೆಸ್ ಪೋರಂ ಕಾರ್ಯದರ್ಶಿ ಅಬ್ದುಲ್ಲ ಕುಂಬಳೆ ಮತ್ತು ಮೊಗ್ರಾಲ್ ದೇಶೀಯ ವೇದಿ ಕಾರ್ಯದರ್ಶಿ ಎಂ.ಎ.ಮೂಸಾ ಅವರು ಜಂಟಿಯಾಗಿ ಅಶ್ರಫ್ ಸ್ಕ್ಯೆಲರ್ ಅವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಸ್ಕೈಲರ್ ತಂಡದ ಸದಸ್ಯರು ಭಾಗವಹಿಸಿದ್ದರು.