ಪತ್ತನಂತಿಟ್ಟು: ಮಕರ ಸಕ್ರಾಂತಿ ಉತ್ಸವಗಳಿಗಾಗಿ ನಾಳೆಯಿಂದ(ಡಿಸೆಂಬರ್ 30)ಶಬರಿಮಲೆ ಸನ್ನಿಧಿ ಮತ್ತೆ ಬಾಗಿಲು ತೆರೆಯಲಿದೆ. ನಾಳೆ ಸಂಜೆ 5 ಕ್ಕೆ ಬಾಗಿಲು ತೆರೆಯಲಾಗುತ್ತದೆಯಾದರೂ 31 ರ ಬೆಳಿಗ್ಗೆಯಿಂದ ಭಕ್ತರಿಗೆ ಪ್ರವೇಶಿಸಲು ಅವಕಾಶವಿದೆ. ಪ್ರವೇಶಕ್ಕಾಗಿ ವರ್ಚುವಲ್ ಕ್ಯೂ ಬುಕಿಂಗ್ ಪ್ರಾರಂಭವಾಗಿದೆ. ಜನವರಿ 19 ರವರೆಗೆ ಭಕ್ತರಿಗೆ ದರ್ಶನ ಸೌಲಭ್ಯವಿರುತ್ತದೆ. ಬಳಿಕ ಜನವರಿ 20 ರಂದು ಸನ್ನಿಧಿ ಮುಚ್ಚಲಿದೆ.
ಸೋಮವಾರದಿಂದ ಭಾನುವಾರದವರೆಗೆ ಪ್ರತಿದಿನ 5,000 ಜನರಿಗೆ ಪ್ರವೇಶ ಸೀಮಿತವಾಗಿದೆ. www.sabarimalaonline.org ವೆಬ್‍ಸೈಟ್ ಮೂಲಕ ಬುಕಿಂಗ್ ಮಾಡಬಹುದಾಗಿದೆ. 31 ರಿಂದ ಭೇಟಿ ನೀಡುವ ಅಯ್ಯಪ್ಪ ಭಕ್ತರಿಗೆ ಕೊರೋನಾ ಆರ್‍ಟಿಪಿಸಿಆರ್ / ಆರ್‍ಟಿ ಲ್ಯಾಂಪ್ / ಎಕ್ಸ್‍ಪ್ರೆಸ್ ನ್ಯಾಟ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯವಾಗಿದೆ.
ಆರ್‍ಟಿಪಿಸಿಆರ್ ನಕಾರಾತ್ಮಕ ಪ್ರಮಾಣಪತ್ರವನ್ನು 48 ಗಂಟೆಗಳ ಒಳಗೆ ನಡೆಸಲಾಗುತ್ತದೆ. ಕರೋನಾ ಟೆಸ್ಟ್ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದ ಯಾವುದೇ ಭಕ್ತರಿಗೆ ಶಬರಿಮಲೆ ಪ್ರವೇಶಿಸಲು ಅವಕಾಶವಿರುವುದಿಲ್ಲ. ವಾಹನ ನಿಲುಗಡೆ ಪ್ರದೇಶಗಳಲ್ಲಿ ಭಕ್ತರಿಗೆ ಈ ಹಿಂದಿದ್ದಂತೆ ಕೊರೋನಾ ಪರಿಶೀಲನಾ ವ್ಯವಸ್ಥೆ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.