ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಮತದಾತರು ಗಮನಿಸಬೇಕಾದ ಕೆಲವು ಜಾಗ್ರತೆ, ವಿಚಾರಗಳು ಇಂತಿವೆ.
ಮತಗಟ್ಟೆಗಳನ್ನು ಪ್ರವೇಶಿಸುವ ವೇಳೆ ಪೋಲಿಂಗ್ ಸಹಾಯಕರು ನಿಡುವ ಸಾನಿಟೈಸರ್ ಬಳಸಿ ಕೈಗಳನ್ನು ಚೆನ್ನಾಗಿ ಶುಚಿಗೊಳಿಸಬೇಕು. ಮತದಾನ ನಡೆಸುವ ಸಂಬಂಧ ದಾಖಲಾತಿ ಪುಸ್ತಕದಲ್ಲಿ ಸಹಿತ ಹಾಕುವ ನಿಟ್ಟಿನಲ್ಲಿ ಮತದಾರ ತಾವೇ ಪೆನ್ ತರಬೇಕು. ಮನೆಯಿಮದ ಹೊರಕ್ಕಿಳಿಯುವ ವೇಳೆಯಿಂದ ಮರಳಿ ಬರುವ ತನಕ ಮೂಗು-ಬಾಯಿ ಸ್ಪಷ್ಟವಾಗಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು. ಪರಿಚಿತರ ಬಳಿ ಯಾವ ಕಾರಣಕ್ಕೂ ಮಾಸ್ಕ್ ಸರಿಸಿ ಮಾತನಾಡಕೂಡದು. ಎದುರುಗೊಳ್ಳುವವರು ಅಂಥಾ ಯತ್ನ ನಡೆಸಿದರೆ ಮಾಸ್ಕ್ ಸರಿಯಾಗಿ ಧರಿಸಿಯೇ ಮಾತನಾಡುವಂತೆ ತಿಳಿಸಬೇಕು. ಯಾವ ಕಾರಣಕ್ಕೂ ಮಕ್ಕಳನ್ನು ಮತಗಟ್ಟೆಗಳಿಗೆ ಕರೆತರಕೂಡದು. ಮತದಾನಕ್ಕಾಗಿ ಸಾಲಾಗಿ ನಿಲ್ಲುವ ವೇಳೆ, ಪರಿಚಿತರಲ್ಲಿ ಮಾತನಾಡುವ ವೇಳೆ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು.
ಮತಗಟ್ಟೆಗಳ ಬಳಿ ಗುಂಪು ಸೇರಕೂಡದು. ಯಾರಿಗೂ ಹಸ್ತಲಘವನ ನೀಡುವ ಸಹಿತ ಶಾರೀರಿಕ ಸ್ಪರ್ಶದ ಸ್ನೇಹಾಚಾರ ನಡೆಸಕೂಡದು. ಮತದಾನ ನಡೆಸಿದ ತಕ್ಷಣ ಮರಳಬೇಕು. ಮತಗಟ್ಟೆಗಳಿಗೆ ಪ್ರವೇಶಿಸುವ ವೇಲೆ, ಮರಳುವ ವೇಳೆ ಸಾನಿಟೈಸರ್ ಬಳಸಬೇಕು. ಮನೆಗೆ ಬಂದ ತಕ್ಷಣ ಕೈಗಳನ್ನು ಸಾಬೂನು ಬಳಸಿ ಶುಚಿಗೊಳಿಸಿ, ಧರಿಸಿದ್ದ ಬಟ್ಟೆ ಒಗೆದು, ಸ್ನಾನ ಮಾಡಿ ನಂತರ ಮನೆಮಂದಿಯೊಂದಿಗೆ ಸಂಪರ್ಕಿಸಬೇಕು. ಸಮಿತಿ ಕಚೇರಿಗಳ ಕಾರ್ಯಕರ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೈಗಳನ್ನು ಆಗಾಗ ಸಾನಿಟೈಸರ್ ಬಳಸಿ ಶುಚಿಗೊಳಿಸಬೇಕು.
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಪೆÇೀಲಿಂಗ್ ಸ್ಟೇಷನ್ ಬಳಿ ಚುನಾವಣೆ ಚಟುವಟಿಕೆ ನಡೆಸುವ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಡ್ಡಾಯವಾಗಿ ರಾಜ್ಯ ಚುನಾವಣೆ ಆಯೋಗದ ಕಟ್ಟುನಿಟ್ಟುಗಳನ್ನು ಪಾಲಿಸಬೇಕು.
ಈ ಕಾರ್ಯಕರ್ತರಿಗೆ ಬ್ಯಾಡ್ಕ್, ಗುರುತುಚೀಟಿ ಕಡ್ಡಾಯವಾಗಿ ಇರಬೇಕು. ಪಕ್ಷಗಳು, ಅಭ್ಯರ್ಥಿಗಳು ಮತದಾತರನ್ನು ವಾಹನಗಳ ಮೂಲಕ ಮತಗಟ್ಟೆಗಳಿಗೆ ಕರೆತರುವುದು ಅಪರಾಧವಾಗಿದೆ. ಮತದಾನದ ದಿನ ಪಂಚಾಯತ್ ವಿಭಾಗದಲ್ಲಿ ಮತಗಟ್ಟೆಗಳಿಂದ 200 ಮೀಟರ್ ಅಂತರದಲ್ಲಿ, ನಗರಸಭೆ ವಿಭಾಗದಲ್ಲಿ 100 ಮೀಟರ್ ಅಂತರದಲ್ಲಿ ಮತಯಾಚನೆ ನಡೆಸಕೂಡದು. ರಾಜಕೀಯ ಪಕ್ಷಗ:ಳ ಹೆಸರು, ಚಿಹ್ನೆ ಇರುವ ಮಾಸ್ಕ್ ಈ ಪರಿಧಿಯಲ್ಲಿ ಧರಿಸಕೂಡದು. ನಿಗದಿತ ದೂರದಲ್ಲಿ ಅಭ್ಯರ್ಥಿಗಳು, ಪಕ್ಷಗಳು ಮತದಾತರಿಗೆ ಸ್ಲಿಪ್ ಒದಗಿಸುವ ಕೆಂದ್ರಗಳಲ್ಲಿ ನೀರಿ, ಸಾಬೂನು, ಸಾನಿಟೈಸರ್ ಕಡ್ಡಾಯವಾಗಿ ರಿಸಬೇಕು. ಸ್ಲಿಪ್ ವಿತರಣೆಗೆ ಇಬ್ಬರಿಗಿಂತ ಅಧಿಕ ಜನ ಇರಕೂಡದು. ಅವರು ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಿರಬೇಕು.
ಅಭ್ಯರ್ಥಿಗಳ ಬೂತ್ ಏಜೆಂಟರು ಹತ್ತಕ್ಕಿಂತ ಅಧಿಕ ಮಂದಿ ಇರಕೂಡದು. ಪೆÇೀಲಿಂಗ್ ಏಜೆಂಟರು ಕುಳಿತುಕೊಳ್ಳುವ ವ್ಯವಸ್ಥೆಯಲ್ಲಿ ಸಾಮಾಜಿಕ ಅಂತರ ಇರಬೇಕು. ಚುನಾವಣೆ ಪ್ರಚಾರಕ್ಕಾಗಿ ಇತರೆಡೆಗಳಿಂದ ಬಂದವರು ಪ್ರಚಾರ ಅವಧಿ ಮುಗಿದ ತಕ್ಷಣ ಮರಳಬೇಕು.
ನಿರೀಕ್ಷಕ, ಚುನಾವಣೆ ಅಧಿಕಾರಿ, ಸುಇರಕ್ಷೆ ಅಧಿಕಾರಿಗಳು, ಪ್ರಿಸೈಡಿಂಗ್ ಅಧಿಕಾರಿ, ವೆಬ್ ಕಾಸ್ಟಿಂಗ್ ಅಧಿಕಾರಿ, ಸೆಕ್ಟರಲ್ ಅಧಿಕಾರಿ ಇವರನ್ನು ಹೊರತಾಗಿ ಇತರ ಯಾರೂ ಮೊಬೈಲ್ ಫೆÇೀನ್ ಮತಗಟ್ಟೆಗಳಿಗೆ ಒಯ್ಯಬಾರದು. ಮತಗಟ್ಟೆಯೊಂದರಲ್ಲಿ 4 ಮಂದಿ ಪೆÇೀಲಿಂಗ್ ಸಿಬ್ಬಂದಿ, ಒಬ್ಬ ಪೆÇೀಲಿಂಗ್ ಸಹಾಯಕ, ಒಬ್ಬ ಪೆÇಲೀಸ್ ಸಿಬ್ಬಂದಿಇರುವರು. ಮತಗಟ್ಟೆಗಳಲ್ಲಿ ವಿಸೇಷ ಚೇತನರು, ರೋಗಿಗಳು, ಹಿರಿಯ ಪ್ರಜೆಗಳು ಮೊದಲಾದವರು ಮತದಾನಕ್ಕಾಗಿ ಸಾಲಾಗಿ ಬರಬೇಕಿಲ್ಲ, ನೇರವಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ನಡೆಸಬಹುದಾಗಿದೆ.