ಪೆÇಂಕುನ್ನಂ: ಕೆ.ಎಸ್.ಆರ್.ಟಿ.ಸಿ ಬಸ್‍ಗಳಲ್ಲಿ ಇನ್ನು ಮೀಸಲು ಆಸನಗಳಿಗೆ ಕೆಂಪು ಬಣ್ಣ ನೀಡಲಾಗುವುದು. ಮಹಿಳೆಯರು, ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮೀಸಲಾಗಿರುವ ಆಸನಗಳು ಕೆಂಪು ಬಣ್ಣದ್ದಾಗಿರುತ್ತವೆ.
ಅಲ್ಲದೆ, ಕೆಎಸ್‍ಆರ್‍ಟಿಸಿ ನಿರ್ವಹಣೆ ಮತ್ತು ಕಾರ್ಯ ನಿರ್ದೇಶಕರು ಬ್ಯಾಕ್‍ರೆಸ್ಟ್, ಫ್ರೇಮ್ ಮತ್ತು ಹ್ಯಾಂಡಲ್ ಬಾರ್ ನ್ನು ಕೆಂಪು ಬಣ್ಣದಿಂದ ಚಿತ್ರಿಸಬೇಕೆಂದು ನಿರ್ದೇಶಿಸಿರುವರು.
ಆಸನ ಕಾಯ್ದಿರಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ವಾಹಕರು(ಕಂಡಕ್ಟರ್) ಮತ್ತು ಪ್ರಯಾಣಿಕರ ನಡುವೆ ವಾಗ್ವಾದಗಳು ಈಗೀಗ ಹೆಚ್ಚೆಚ್ಚು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಇಲಾಖೆ ಇಂತಹದೊಂದು ನೂತನ ವಿಧಾನ ಆರಂಭಿಸಲು ಚಿಂತನೆ ನಡೆಸಿದೆ.