ಕಾಸರಗೋಡು: ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಅವರು ಮೊದಲ ಬಾರಿಗೆ ಕೈ ಗುರುತಿಲ್ಲದ ಚಿಹ್ನೆಗೆ ಮತ ಚಲಾಯಿಸಿದ್ದು ಈ ಬಗ್ಗೆ ಸಂಸದರು ಒಂದಷ್ಟು ವಿಷಣ್ಣರಾಗಿ ಮಾತುಗಳನ್ನಾಡಿದ್ದಾರೆ. ಸಂಸದರು ಮತ ಚಲಾಯಿಸಿದ ವಾರ್ಡ್‍ನಲ್ಲಿ ಈ ಬಾರಿ ಲೀಗ್ ಅಭ್ಯರ್ಥಿ ಯುಡಿಎಫ್ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದಾರೆ. ಉಣ್ಣಿತ್ತಾನ್ ಅವರ ಮತವು ಪತನಕ್ಕಾಡ್‍ನ ಎಸ್‍ಎನ್ ಯುಪಿ ಶಾಲೆಯ ಬೂತ್‍ನಲ್ಲಿತ್ತು.
"ನನಗೆ ಮತದಾನದ ಹಕ್ಕು ದೊರೆತಾಗಿನಿಂದ ನಾನು ಕೈ ಗುರುತಿಗಷ್ಟೇ ಮತ ಚಲಾಯಿಸುತ್ತಿದ್ದೆ. ನಾನು ಪಂಚಾಯತ್, ಪುರಸಭೆ ಮತ್ತು ನಗರ ಸಭೆಗಳಿಗೆ,ು ಎಲ್ಲಾ ಸ್ಥಳೀಯ ಸರ್ಕಾರ, ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳಲ್ಲಿ ಕೈ ಗುರುತಿಗೆ ಮತ ಚಲಾಯಿಸಿದ್ದವ. ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು 'ಏಣಿಯ' ಚಿಹ್ನೆಯ ಮೇಲೆ ಮತ ಚಲಾಯಿಸಿದ್ದೇನೆ" ಎಂದು ರಾಜಮೋಹನ್ ಉಣ್ಣಿತ್ತಾನ್ ಪೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿರುವರು.
ಸ್ಥಳೀಯ ಸರ್ಕಾರದ ಚುನಾವಣೆಯಲ್ಲಿ ಕೊನೆಯ ಹಂತದ ಮತದಾನ ಸೋಮವಾರ ನಡೆಯಿತು. ಮೂರನೇ ಹಂತದ ಮತದಾನ ಮಲಪ್ಪುರಂ, ಕೋಝಿಕ್ಕೋಡ್ , ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ನಡೆಯಿತು. ಮೂರನೇ ಹಂತದಲ್ಲಿ 354 ಸ್ಥಳೀಯ ಸಂಸ್ಥೆಗಳ 6867 ವಾರ್ಡ್‍ಗಳಲ್ಲಿ 22,151 ಅಭ್ಯರ್ಥಿಗಳು ಸ್ಪರ್ಧಿಸಿರುವರು. ಒಟ್ಟು 89,74,993 ಮತದಾರರಿದ್ದಾರೆ. 10,842 ಮತದಾನ ಕೇಂದ್ರಗಳಿವೆ. ಈ ಪೈಕಿ 1,105 ಬೂತ್‍ಗಳು ಸೂಕ್ಷ್ಮ ಮತಗಟ್ಟೆಗಳಾಗಿವೆ. ಡಿ.16 ರಂದು ಮತ ಎಣಿಕೆ ನಡೆಯಲಿದೆ.