HEALTH TIPS

ಮಾಸ್ಕ್‌ ಧರಿಸದಿದ್ದಲ್ಲಿ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಕೆಲಸ: ಗುಜರಾತ್ ಹೈಕೋರ್ಟ್!

        ಅಹಮದಾಬಾದ್‌: ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೆ ನಿಯಮ ಉಲ್ಲಂಘಿಸಿದ ವ್ಯಕ್ತಿಗಳನ್ನು ಕಡ್ಡಾಯವಾಗಿ 10-15 ದಿನಗಳ ಕಾಲ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ವೈದ್ಯಕೀಯೇತರ ಸಮುದಾಯ ಸೇವೆಗಳಿಗೆ ಒಳಪಡಿಸುವ ನಿಯಮವನ್ನು ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಗುಜರಾತ್‌ ಹೈಕೋರ್ಟ್‌ ನಿರ್ದೇಶನ ನೀಡಿದೆ.

       ನಿರ್ವಹಣಾ ಸಮಸ್ಯೆಗಳ ಕಾರಣದಿಂದಾಗಿ ಇಂತಹ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಹಿಂದೇಟು ಹಾಕಿತ್ತು.

        ಇದರ ಬೆನ್ನಲ್ಲೇ ಗುಜರಾತ್‌ ಹೈಕೋರ್ಟ್‌, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದವರಿಗೆ ₹1000 ದಂಡ ಮಾತ್ರವಲ್ಲದೇ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 10-15 ದಿನಗಳವರೆಗೆ ವೈದ್ಯಕೀಯೇತರ ಸಮುದಾಯ ಸೇವೆಗಳಿಗೆ ಒಳಪಡಿಸುವ ನಿಯಮ ರೂಪಿಸುವಂತೆ ನಿರ್ದೇಶನ ನೀಡಿದೆ.

ಕೋವಿಡ್‌ ನಿಯಂತ್ರಿಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಾಗಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಜೆ.ಬಿ ಪಾರ್ಡಿವಾಲಾ ಅವರು ವಿಭಾಗೀಯ ಪೀಠವು ಈ ಆದೇಶವನ್ನು ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವಿಕೆ, ಸಾಮಾಜಿಕ ಅಂತರಗಳ ನಿಯಮವನ್ನು ಉಲ್ಲಂಘಿಸಿದವರನ್ನು ಕಡ್ಡಾಯವಾಗಿ ಕೋವಿಡ್‌ ಆರೈಕಾ ಕೇಂದ್ರಗಳಲ್ಲಿ ಸಮುದಾಯ ಸೇವೆ ಮಾಡಲು ಹೇಳಬೇಕು ಎಂದು ಕೋರ್ಟ್‌ ಆದೇಶಿಸಿದೆ.

      ಇವರನ್ನು 10-15 ದಿನಗಳ ಕಾಲ ಆರೈಕೆ ಕೇಂದ್ರಗಳ ಕಾಲ ವೈದ್ಯಕೀಯೇತರ ಸೇವೆಗಳಾದ ಸ್ವಚ್ಛತೆ, ಅಡುಗೆ, ಆಹಾರ ವಿತರಣೆ, ಮನೆಗೆಲಸ, ದತ್ತಾಂಶ ಮತ್ತು ಮಾಹಿತಿ ದಾಖಲಿಸುವಂತಹ ಕೆಲಸಗಳಿಗೆ ಒಳಪಡಿಸಬೇಕು. ವಯಸ್ಸು ಮತ್ತು ಅರ್ಹತೆಗೆ ಅನುಸಾರವಾಗಿ ಕೆಲಸಗಳನ್ನು ಹಂಚಬೇಕು ಎಂದು ನ್ಯಾಯಾಲಯ ಸೂಚಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries