ಕೋದಮಂಗಲಂ: ಈ ಬಾರಿಯ ಚುನಾವಣೆಯು ಕುಟ್ಟಂಪುಳ ಪಂಚಾಯತ್‌ನಲ್ಲಿರುವ ಪಿನವೂರ್ಕುಡಿ ಬುಡಕಟ್ಟು ಜನಾಂಗದ ಜನರಿಗೆ ಭರವಸೆ ಮತ್ತು ಆಶಾವಾದ ತುಂಬಿದೆ. ಯಾರು ಗೆದ್ದರೂ ಅಲ್ಲಿಯ ಪಂಚಾಯತಿ ಅಧ್ಯಕ್ಷರಾಗುವುದು ಅವರ ಜನಾಂಗದ ಸದಸ್ಯರೆನ್ನುವುದು ವಿಶೇಷ.
ಎರ್ನಾಕುಳಂ ಜಿಲ್ಲೆಯಲ್ಲಿ ಅತಿ ಹೆಚ್ಚು ಬುಡಕಟ್ಟು ಜನಸಂಖ್ಯೆ ಹೊಂದಿರುವ ಕುಟ್ಟಂಪುಳದಲ್ಲಿ ಪಂಚಾಯತ್ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ.
ಸ್ಪರ್ಧಾ ಕಣದಲ್ಲಿ ಮೂರೂ ರಂಗಗಳು ಸಮಬಲವಾಗಿ ಮುನ್ನಡೆಯುತ್ತಿರುವುದರಿಂದ ಪಿನವೂರ್ಕುಡಿಯ ಚುನಾವಣಾ ಹೋರಾಟವು ಅತ್ಯಪೂರ್ವವಾಗಿದೆ. ಬಾಬು ಪದ್ಮನಾಭನ್ (ಯುಡಿಎಫ್), ಬಿನೀಶ್ ನಾರಾಯಣನ್ (ಎಲ್ಡಿಎಫ್) ಮತ್ತು ಗೋಪಾಲಕೃಷ್ಣನ್ ಕೆ.ಕೆ (ಎನ್‌ಡಿಎ)ಅಭ್ಯರ್ಥಿಗಳಾಗಿ ಮುಂಚೂಣಿಯಲ್ಲಿದ್ದಾರೆ. ಹೊಸ ಸದಸ್ಯ ಆಯ್ಕೆಯಾದ ತಕ್ಷಣ ರಸ್ತೆಗೆ ಜಲ್ಲಿಕಲ್ಲುಗಳನ್ನು ಹಾಕಿ ಶೀಘ್ರದಲ್ಲೇ ದುರಸ್ಥಿಗೊಳಿಸುವರು ಎಂದು ಭರವಸೆಯಿಂದಿದ್ದಾರೆ.