ಕೊಲ್ಲಂ: ಕೇರಳದ ಜೈಲುಗಳು ಇನ್ನು ಸಂಪೂರ್ಣ ನಾದಮಯವಾಗಲಿದೆ!. ಯಾಕೆಂದರೆ ಇನ್ನು ಜೈಲುಗಳಲ್ಲಿ ಹಾಡಗಳನ್ನು ದಿನವಿಡೀ ಕೇಳಬಹುದು. ಬೆಳಿಗ್ಗೆ 6 ರಿಂದ ರಾತ್ರಿ 8 ರವರೆಗೆ ಎಫ್‍ಎಂ ರೇಡಿಯೋ ಕೇಳುವಂತೆ ಜೈಲು ಡಿಜಿಪಿ ಕೈದಿಗಳಿಗೆ ನಿರ್ದೇಶನ ನೀಡಿದ್ದಾರೆ. ಕಾರಾಗೃಹಗಳಲ್ಲಿ ಕೈದಿಗಳ ಆತ್ಮಹತ್ಯೆಯನ್ನು ತಡೆಯುವ ಪ್ರಯತ್ನಗಳ ಭಾಗವಾಗಿ ಮಾನಸಿಕ ಸ್ಥಿತಿತ ಕಾಯ್ದುಕೊಳ್ಳಲು ಹೊಸ ಉಪಕ್ರಮ ಕೈಗೊಳ್ಳಲಾಗುತ್ತಿದೆ.
ಕೈದಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅವರಿಗೆ ನಿರಾಳ ಭಾವನೆ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ನಿಯತಕಾಲಿಕೆಗಳನ್ನು ಎನ್‍ಜಿಒಗಳ ಸಹಾಯದಿಂದ ಖರೀದಿಸಿ ವಿತರಿಸಬೇಕು. ವ್ಯಾಯಾಮ ಕಡ್ಡಾಯ. ಮತ್ತು ಕನಿಷ್ಟ ಅರ್ಧ ಘಂಟೆಯ ಸೂರ್ಯನ ಬೆಳಕನ್ನು ಪಡೆಯುತ್ತೀರಾ ಎಂಬುದನ್ನು ಖಚಿತಪಡಿಸಲು ಸೂಚಿಸಲಾಗಿದೆ.
ಕುಟುಂಬ ಸದಸ್ಯರಿಗೆ ಪೋನ್ ಕರೆಗಳನ್ನೂ ಮಾಡಲು ಅನುಮತಿಸಲಾಗುವುದು. ಹಿಂಜರಿಕೆಯುಳ್ಳವರಿಗೆ ಪೋನ್ ಕರೆ ಮಾಡಲು ಪೆÇ್ರೀತ್ಸಾಹಿಸಬೇಕು ಎಂದು ಜೈಲಿನ ಡಿಜಿಪಿ ಹೇಳಿದರು. ಖೈದಿಗಳಿಗೆ ವಾರಕ್ಕೊಮ್ಮೆ ಕೌನ್ಸೆಲಿಂಗ್ ತರಗತಿಗಳನ್ನು ನಡೆಸಲಾಗುವುದು. ಇದಕ್ಕಾಗಿ ಎನ್‍ಜಿಒಗಳೊಂದಿಗೆ ಸಮಾಲೋಚಿಸಿ ಫಲಕವನ್ನು ರಚಿಸಬೇಕು. ಕೈದಿಗಳನ್ನು ತಮ್ಮ ಎಂದಿನ ರೀತಿಯಲ್ಲಿ ವ್ಯವಹರಿಸಲು ಮತ್ತು ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಲು ಸಹಾಯಕ ಜೈಲು ಅಧಿಕಾರಿಯನ್ನು ನೇಮಿಸಬೇಕು. ಜೈಲುಗಳಿಗೆ ಕಲ್ಯಾಣ ಅಧಿಕಾರಿಗಳ ಭೇಟಿಯನ್ನು ಖಚಿತಪಡಿಸಿಕೊಳ್ಳಲು ಸಹ ಉದ್ದೇಶಿಸಲಾಗಿದೆ.
ಕಾರಾಗೃಹಗಳಲ್ಲಿನ ಆತ್ಮಹತ್ಯಾ ಪ್ರಯತ್ನಗಳನ್ನು ತಡೆಯಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಕೆಲವು ನಿರ್ದೇಶನಗಳನ್ನು ನೀಡಿತ್ತು. ಜೈಲುವಾಸಿಗಳನ್ನು ಮುಖ್ಯವಾಹಿನಿಗೆ ಸೇರಲು ಮತ್ತು ನಂತರ ಸಮುದಾಯಕ್ಕೆ ಮರಳಲು ಕೈದಿಗಳಿಗೆ ನಿರಂತರ ಮಾನಸಿಕ ಆರೋಗ್ಯ ರಕ್ಷಣೆ ನೀಡುವುದು ಲಕ್ಷ್ಯವಾಗಿದೆ. ಇದರ ಆಧಾರದ ಮೇಲೆ ಕೈದಿಗಳಿಗೆ ಮಾನಸಿಕ ಬೆಂಬಲ ಮತ್ತು ಸೌಕರ್ಯವನ್ನು ನೀಡುವ ಸಂಬಂಧವನ್ನು ಅಭಿವೃದ್ಧಿಪಡಿಸಲು ಸಿಬ್ಬಂದಿಗೆ ನಿರ್ದೇಶಿಸಲಾಗಿದೆ.
ದೀರ್ಘಕಾಲೀನ ಶಿಕ್ಷೆಯ ಪರಿಣಾಮ, ಪೆರೋಲ್ ನಿರಾಕರಣೆ, ಏಕಾಂತದ ಸೆರೆವಾಸ, ಅನಾರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಆತ್ಮಹತ್ಯೆಗೆ ಕಾರಣವಾಗುತ್ತಿದೆ ಎಂದು ಸಂಶೋಧಿಸಲಾಗಿದೆ. ಹೊರಗಿನವರ ಪತ್ರಗಳು ಅಥವಾ ಭೇಟಿಗಳ ನಿರಾಕರಣೆ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.