ಬದಿಯಡ್ಕ: ಮಾನ್ಯದ ಶ್ರೀ ಅಯ್ಯಪ್ಪ ಸೇವಾ ಸಂಘದ ನೇತೃತ್ವದಲ್ಲಿ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಗರ್ಭಗುಡಿ, ಸುತ್ತುಗೋಪುರ, ಪಾಕಶಾಲೆ, ದಾಸ್ತಾನು ಕೊಠಡಿ, ಶೌಚಾಲಯ, ಸ್ನಾನಗೃಹ ಇತ್ಯಾದಿಗಳನ್ನು ಪುನಃ ನವೀಕರಿಸಿ ಪುನಃ ಪ್ರತಿಷ್ಠಾ ಮಹೋತ್ಸವ ಸೋಮವಾರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸ್ಥಳೀಯ ವಿವಿಧ ಸಂಘಸಂಸ್ಥೆ ಮಹನೀಯರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ರಾತ್ರಿ ಸುದರ್ಶನ ಹೋಮ ನಡೆಯಿತು.
ಶನಿವಾರ ಬೆಳಿಗ್ಗೆ 7 ರಿಂದ ತಿಲಹೋಮ, ಸಾಯುಜ್ಯಪೂಜೆ ನಡೆಯಿತು. ಭಾನುವಾರ ರಾತ್ರಿ 8 ರಿಂದ ವಾಸ್ತುಬಲಿ, ರಾಕ್ಷೋಘ್ನಹೋಮ ನಡೆಯಿತು. ಸೋಮವಾರ ಬೆಳಿಗ್ಗೆ 7 ರಿಂದ ಮಲ್ಲ ಶ್ರೀದುರ್ಗಾಪರಮೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀ ಆನೆಮಜಲು ವಿಷ್ಣು ಭಟ್ ಅವರ ದಿವ್ಯ ಹಸ್ತದಿಂದ ದೀಪ ಪ್ರಜ್ವಲನೆಯೊಂದಿಗೆ ಪುನಃ ಪ್ರತಿಷ್ಠಾ ಮಹೋತ್ಸವ ಆರಂಭಗೊಂಡು ಬಳಿಕ 108 ಕಾಯಿ ಗಣಪತಿಹೋಮ ನೆರವೇರಿತು. ಜೊತೆಗೆ ವಿವಿಧ ಸಂಘಸಂಸ್ಥೆಗಳಿಂದ ಭಜನಾ ಸಂಕೀರ್ತನೆ, ಮಧ್ಯಾಹ್ನ 12.37ರ ಶುಭಮುಹೂರ್ತದಲ್ಲಿ ಶ್ರೀಅಯ್ಯಪ್ಪ ದೇವರ ಪುನಃಪ್ರತಿಷ್ಠೆ, ಮಹಾಪೂಜೆ, ಪ್ರಸಾದ ಭೋಜನ, ವಿವಿಧ ತಂಡಗಳಿಂದ ಭಜನೆ ನಡೆಯಿತು. ರಾತ್ರಿ 8 ರಿಂದ ಮಹಾಪೂಜೆ, ಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ಕೋವಿಡ್ ಮಾನದಂಡ ಅನುಸಾರ ಸರಳವಾಗಿ ನೆರವೇರಿತು.