ತಿರುವನಂತಪುರ: ಕೈದಿಗಳು ಮಾದಕವಸ್ತುಗಳನ್ನು ಬಳಸುತ್ತಾರೆಯೇ ಎಂದು ಪತ್ತೆಹಚ್ಚಲು ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಎರಡು ಶ್ವಾನಗಳನ್ನು ಜವಾಬ್ದಾರಿ ನೀಡಲಾಗಿದೆ. ತರಬೇತಿ ಪಡೆದ ಕೀರಾ ಮತ್ತು ರೂಬಿ ಎಂಬೆರಡು ಶ್ವಾನಗಳು ಜೈಲಿನ ಆರೈಕೆಯಲ್ಲಿ ಕರ್ತವ್ಯ ನಿರ್ವಹಿಸಲಿವೆ. ಇದರೊಂದಿಗೆ ರಾಜ್ಯದ ಮೂರು ಕೇಂದ್ರ ಜೈಲುಗಳಲ್ಲಿ ಶ್ವಾನ ದಳಗಳನ್ನು ಸ್ಥಾಪಿಸಲಾಗಿದೆ.
ಮಾದಕ ದ್ರವ್ಯಗಳು ಜೈಲಿಗೆ ಪ್ರವೇಶಿಸುವುದನ್ನು ತಡೆಯುವುದು ಮತ್ತು ಅದನ್ನು ಕೈದಿಗಳು ಬಳಸುವುದನ್ನು ಪತ್ತೆಹಚ್ಚುವುದು ಶ್ವಾನಗಳ ಕರ್ತವ್ಯವಾಗಿದೆ. ಅದಕ್ಕಾಗಿ ಶ್ವಾನಗಳು ದಿನದ 24 ಗಂಟೆಯೂ ಜೈಲಿನೊಳಗೆ ಗಸ್ತು ತಿರುಗಲಿವೆ. ಕೀರಾ ಮತ್ತು ರೂಬಿಗೆ ವಿಐಪಿ ಸೌಲಭ್ಯವನ್ನು ಏರ್ಪಡಿಸಲಾಗಿದೆ.