ಮಂಜೇಶ್ವರ: ಮೀಯಪದವು ಅಯ್ಯಪ್ಪ ಭಜನಾ ಮಂದಿರ ಬ್ರಹ್ಮಕಲಶೋತ್ಸವವು ಫೆಬ್ರವರಿ 13 ರಿಂದ 16 ರವರೆಗೆ ಜರಗಲಿದ್ದು ಆ ಬಗೆಗಿನ ಪೂರ್ವಸಿದ್ಧತಾ ವಿಶೇಷ ಸಭೆ ಇತ್ತೀಚೆಗೆ ಅಯ್ಯಪ್ಪ ಭಜನಾಮಂದಿರ ವಠಾರದಲ್ಲಿ ಜರಗಿತು.
ಶ್ರೀ ಅಯ್ಯಪ್ಪ ಸೇವಾಸಂಘ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಪಳ್ಳತ್ತಡ್ಕ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶೀಧರ ರಾವ್ ಆರ್ ಎಂ ಅವರು ಇದುವರೆಗಿನ ಕಾರ್ಯಪ್ರಗತಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕೋಶಾಧಿಕಾರಿ ಸದಾಶಿವ ರಾವ್ ಟಿ ಡಿ ವಿವಿಧ ಸಮಿತಿಯ ಸಂಚಾಲಕರನ್ನು ಘೋಸಿದರು. ಪ್ರಧಾನಕಾರ್ಯದರ್ಶಿ ಸದಾನಂದ ರೈ ಕಳ್ಳಿಗೆಬೀಡು, ಮಂದಿರ ಗುರು ಸ್ವಾಮಿ ರಂಜಿತ್ ಕೋಡಿ, ಕಾರ್ಯದರ್ಶಿ ತಿಮ್ಮಪ್ಪ ಮೈತಾಳ್, ಕಾರ್ಯಾಧ್ಯಕ್ಷ ಸುಬ್ಬಣ್ಣ ಆಳ್ವ ಬಾನಬೆಟ್ಟು ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸದಾನಂದ ರೈ ಕಳ್ಳಿಗೆಬೀಡು ಸ್ವಾಗತಿಸಿ, ಜೀರ್ಣೋದ್ಧಾರ ಸಮಿತಿ ಜೊತೆ ಕಾರ್ಯದರ್ಶಿ ನಿರೂಪಿಸಿ ಕಾರ್ಯದರ್ಶಿ ರಾಜಾರಾಮ ರಾವ್ ಮೀಯಪದವು ವಂದಿಸಿದರು.