ಬದಿಯಡ್ಕ: 60 ವರ್ಷಗಳ ಕಾಲ ಆಡಳಿತವನ್ನು ನಡೆಸಿ ಕಾಂಗ್ರೆಸ್ ಪಕ್ಷವು ದೇಶವನ್ನು ಲೂಟಿಮಾಡಿದರೆ ಕೇರಳದಲ್ಲಿ ಕಮ್ಯೂನಿಸ್ಟ್ ಆಡಳಿತವು ರಾಜ್ಯದ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ. ಕೇವಲ 6 ವರ್ಷಗಳಲ್ಲಿ 250ಕ್ಕಿಂತಲೂ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಿಜೆಪಿ ಸರಕಾರವು ದೇಶದ ಒಳಿತಿಗಾಗಿ ಶ್ರಮಿಸುತ್ತಿದೆ. ವಿವಿಧ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪ್ರತೀ ಗ್ರಾಮಪಂಚಾಯಿತಿ ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಬೇಕಿದೆ. ಬದಿಯಡ್ಕದಲ್ಲಿ ಬಿಜೆಪಿ ಅಧಿಕಾರಕ್ಕೆ ಏರುವುದರಲ್ಲಿ ಯಾವುದೇ ಸಂದೇಹ ಬೇಡ. ಅಭಿವೃದ್ಧಿಗಾಗಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಅನಿವಾರ್ಯ ಎಂದು ಬಿಜೆಪಿ ಕೇರಳ ರಾಜ್ಯ ನೇತಾರ ಕುಮ್ಮನಂ ರಾಜಶೇಖರ್ ಹೇಳಿದರು.
ಪಳ್ಳತ್ತಡ್ಕ ಮುದ್ದುಮಂದಿರದಲ್ಲಿ ಬಿಜೆಪಿ ಬದಿಯಡ್ಕ ಗ್ರಾಮಪಂಚಾಯಿತಿ ವಾರ್ಡುಗಳ ಕುಟುಂಬ ಸಂಗಮವನ್ನುದ್ದೇಶಿಸಿ ಅವರು ಮಾತನಾಡಿದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಎಡನೀರು ಡಿವಿಶನ್ ಅಭ್ಯರ್ಥಿ ಶೈಲಜಾ ಭಟ್, ರಾಮಕೃಷ್ಣ ಹೆಬ್ಬಾರ್, ವಿವಿಧ ವಾರ್ಡುಗಳ ಅಭ್ಯರ್ಥಿಗಳಾದ ಕೆ.ಎನ್.ಕೃಷ್ಣ ಭಟ್, ಬಾಲಕೃಷ್ಣ ಶೆಟ್ಟಿ ಕಡಾರು, ಈಶ್ವರ ಮಾಸ್ಟರ್ ಪೆರಡಾಲ, ಜಯಂತಿ ಕುಂಟಿಕಾನ, ವನಿತ ಕುಮಾರಿ, ಅಶ್ವಿನಿ, ಪುಷ್ಪಾ ಭಾಸ್ಕರ್ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿ, ಕೃಷ್ಣ ಪ್ರಸಾದ್ ವಂದಿಸಿದರು.