ಕೊಚ್ಚಿ: ಬಾರ್‍ಗಳನ್ನು ಮತ್ತೆ ತೆರೆಯಲು ಅನುಮತಿ ನೀಡಿದ ಸರ್ಕಾರದ ತೀರ್ಮಾನದ ವಿರುದ್ದ ಕೇರಳ ಮದ್ಯ ವಿರೋಧಿ ಸಮನ್ವಯ ಸಮಿತಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸರ್ಕಾರವು ಶಾಲೆಗಳಿಗಿಂತ ಮದ್ಯಕ್ಕೆ ಆದ್ಯತೆ ನೀಡುತ್ತಿದೆ. ಶಾಲೆಗಳು ಮುಚ್ಚಲ್ಪಟ್ಟಿದ್ದರೂ ಗಂಭೀರವಾಗಿ ಪರಿಗಣಿಸದ ಸರ್ಕಾರ ಚುನಾವಣೆಯ ಸಂದರ್ಭ ಅಬಕಾರಿ ಇಲಾಖೆಗೆ ಒದಗಿಸಿದ ಸಹಾಯಕ್ಕೆ ಪ್ರತಿಯಾಗಿ ಬಾರ್‍ಗಳನ್ನು ಮತ್ತೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಸಮನ್ವಯ ಸಮಿತಿ ವಾಗ್ದಾಳಿ ನಡೆಸಿದೆ.
ಇದರಿಂದ ಕೋವಿಡ್ ತೀವ್ರ ಸ್ವರೂಪದಲ್ಲಿ ಹರಡಲು ಕಾರಣವಾಗುತ್ತದೆ. ಗುಂಪಿನೊಂದಿಗೆ ಕುಡಿಯಲು ಜನರು ಮುಂದಾಗುತ್ತಾರೆ. ಸಂಯೋಜಿತ ವ್ಯವಸ್ಥೆಯಡಿ ಕುಡಿಯುವುದು ಮತ್ತು ಹವಾನಿಯಂತ್ರಿತ ಬಾರ್‍ಗಳೊಳಗೆ ದೀರ್ಘಕಾಲ ಕುಳಿತುಕೊಳ್ಳುವುದು ಮತ್ತು ಸಾಮಾಜಿಕ ದೂರವನ್ನು ಇಟ್ಟುಕೊಳ್ಳದಿರುವುದು ಕೋವಿಡ್‍ನ ಹರಡುವಿಕೆಗೆ ಕಾರಣವಾಗಬಹುದು ಎಂದದು ಬೊಟ್ಟುಮಾಡಿದೆ.
ಮದ್ಯಪಾನ ಮಾಡುವವರು ಸಾಮಾಜಿಕ ದೂರವನ್ನು ಕಾಯ್ದುಕೊಳ್ಳುವುದು ಸುಲಭವಲ್ಲ. ಬಾರ್‍ಗಳನ್ನು ತೆರೆಯುವ ನಿರ್ಧಾರವು ಸರ್ಕಾರದ ಅಭಿವೃದ್ದಿ ಪ್ರಯತ್ನಗಳಿಗೆ ಕಪ್ಪು ಚುಕ್ಕೆಯಾಗಲಿದೆ. ಪ್ರಜಾಪ್ರಭುತ್ವ ಸರ್ಕಾರವು ಆದಾಯ ಮೂಲವನ್ನು ಗಮನಿಸದೆ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಈಗಿನ ನಿರ್ಧಾರವು ಕುಟುಂಬಗಳ ಶಾಂತಿ ಮತ್ತು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಪ್ರತ್ಯೇಕವಾಗಿ ತಿಳಿಸಿದೆ.
ಕೇರಳ ಮದ್ಯ ವಿರೋಧಿ ಸಮನ್ವಯ ಸಮಿತಿ ಕೊಚ್ಚಿಯ ರಾಜ್ಯ ಅಧ್ಯಕ್ಷ ನ್ಯಾಯವಾದಿ ಪಿ.ಕೆ. ಶಂಸುದ್ದೀನ್ ಉದ್ಘಾಟಿಸಿದ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಚಾರ್ಲಿ ಪಾಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ಕುರುವಿಳ, ಪೆÇ್ರ. ಕೆ.ಕೆ. ಕೃಷ್ಣನ್, ಪಿ.ಎಚ್.ಶಹಜಹಾನ್, ಜೇಮ್ಸ್ ಕೊರುಂಪೆಲ್, ಫ್ರಾ. ಜಾರ್ಜ್ ಸ್ಟ್ರೈಟ್, ಫ್ರಾ. ಅಗಸ್ಟೀನ್ ಬೈಜು ಕುಟ್ಟಿಕಲ್, ಕೆ.ಎ.ಪಾಲಸ್, ಸೆಬಾಸ್ಟಿಯನ್ ವಲಿಯಾಪರಂಪಿಲ್, ಸಿಸ್ಟರ್ ಆನ್, ಟಿ.ಎಂ. ವರ್ಗೀಸ್, ಶೈಬಿ ಪಪ್ಪಚನ್, ತಂಗಚ್ಚನ್ ವೆಲಿಯಿಲ್, ಮಿನಿ ಆಂಟನಿ, ಡಾ. ಶುದ್ಧ ಜಾಕೋಬ್ ಮತ್ತು ಹಿಲ್ಟನ್ ಚಾಲ್ರ್ಸ್ ಉಪಸ್ಥಿತರಿದ್ದರು.