ಕಾಸರಗೋಡು: ಕೋವಿಡ್ ಬಧಿತರೂ, ಕ್ವಾರೆಂಟೈನ್ ನಲ್ಲಿರುವವರೂ ಆಗಿರುವ ಮಂದಿಗಾಗಿ ಏರ್ಪಡಿಸಿರುವ ವಿಶೇಷ ಅಂಚೆ ಬಾಲೆಟ್ ಮೂಲಕ ಮತದಾನನಡೆಸುವವರಿಗೆ ಅಂಚೆ ಶುಲ್ಕ ಈಡುಮಾಡುವುದಿಲ್ಲ ಎಂದು ರಾಜ್ಯ ಚುನಾವಣೆ ಕಮೀಷನರ್ ವಿ.ಭಾಸ್ಕರನ್ ತಿಳಿಸಿರುವರು. ವಿಲಂಬವಿಲ್ಲದೆ ಅಂಚೆ ಮೂಲಕ ಮತದಾನ ನಡೆಸುವ ನಿಟ್ಟಿನಲ್ಲಿ ಸ್ಪೀಡ್ ಪೆÇೀಸ್ಟ್ ಮೂಲಕ ರವಾನೆ ನಡೆಸುವ ಕ್ರಮ ಕೈಗೊಳ್ಳಲಾಗಿದೆ. ಇದರ ವೆಚ್ಚವನ್ನು ರಾಜ್ಯ ಚುನಾವಣೆ ಆಯೋಗ ವಹಿಸಲಿದೆ. ಪೆÇೀಸ್ಟ್ ಮಾಸ್ಟರ್ ಜನರಲ್ ಅವರೊಂದಿಗೆ ಮಾತುಕತೆ ನಡೆಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಮೀಷನರ್ ತಿಳಿಸಿದರು.
ಪೋಲಿಂಗ್ ಸಿಬ್ಬಂದಿಗೆ ತರಬೇತಿ ಆರಂಭ
ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಪೋಲಿಂಗ್ ಸಿಬ್ಬಂದಿಗೆ ತರಬೇತಿ ಕಾಸರಗೋಡು ಜಿಲ್ಲೆಯಲ್ಲಿ ಆರಂಭಗೊಂಡಿದೆ.
ಪರಪ್ಪ, ಕಾರಡ್ಕ, ಮಂಜೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಗ್ರಾಮಪಂಚಾಯತ್ ಗಳ ಪೆÇೀಲಿಂಗ್ ಸಿಬ್ಬಂದಿಗಾಗಿ ತರಬೇತಿ ನಡೆಸಲಾಗುತ್ತಿದೆ. ಪರಪ್ಪ ಬ್ಲೋಕ್ ವ್ಯಾಪ್ತಿಯ ಮಮದಿಗೆ ಪರಪ್ಪ ಸರಕಾರಿ ಪ್ರೌಢಶಾಲೆ, ಕಾರಡ್ಕ ಬ್ಲಾಕ್ ವ್ಯಾಪ್ತಿಯವರಿಗೆ ಬೋವಿಕ್ಕಾನ ಬಿ.ಎ.ಆರ್.ಎಚ್.ಎಸ್ ನಲ್ಲಿ, ಮಂಜೇಶ್ವರ ಬ್ಲೋಕ್ ವ್ಯಾಪ್ತಿಯ ಮಮದಿಗೆ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತರಬೇತಿ ನಡೆಯುತ್ತಿದೆ. ಬೆಳಗ್ಗೆ ಮತ್ತು ಮಧ್ಯಾಹ್ನ ಎಂಬ 2 ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಡಿ9.ರಂದು ತರಬೇತಿ ಸಂಪನ್ನಗೊಳ್ಳಲಿದೆ.
ಕಾಸರಗೋಡು, ಕಾಞಂಗಾಡ್, ನೀಲೇಶ್ವರ ಬ್ಲಾಕ್ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್, ನಗರಸಭೆ ಗಳ ಪೆÇೀಲಿಂಗ್ ಸಿಬ್ಬಂದಿಗೆ ಡಿ.3,4ರಂದು ತರಬೇತಿ ನಡೆಯಲಿದೆ. ಕಾಸರಗೋಡು ಬ್ಲೋಕ್ ವ್ಯಾಪ್ತಿಯ ಮಂದಿಗೆ ಕಾಸರಗೋಡು ಸರಕಾರಿ ಕಾಲೇಜಿನಲ್ಲೂ, ಕಾಞಂಗಾಡ್ ಬ್ಲಾಕ್ ವ್ಯಾಪ್ತಿಯ ಮಂದಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಸಾಲೆ, ನೀಲೇಶ್ವರ ಬ್ಲಾಕ್ ವ್ಯಾಪ್ತಿಯ ಮಂದಿಗೆ ಪಡನ್ನಕ್ಕಾಡ್ ನೆಹರೂ ಕಲಾ-ವಿಜ್ಞಾನ ಕಾಲೇಜಿನಲ್ಲಿ ತರಬೇತಿ ನಡೆಯಲಿದೆ.
ಚುನಾವಣೆ ನಿರೀಕ್ಷಕ ಭೇಟಿ:
ಪೋಲಿಂಗ್ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿರುವ ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗೆ ರಾಜ್ಯ ಚುಬನಾವಣೆ ಆಯೋಗದ ಚುನಾವಣೆ ನಿರೀಕ್ಷಕ ನರಸಿಂಹುಗಾರಿ ಟಿ.ಎನ್.ರೆಡ್ಡಿ ಅವರು ಸೋಮವಾರ ಭೇಟಿ ನೀಡಿ, ಅಗತ್ಯದ ಸಲಹೆ,ಸೂಚನೆಗಳನ್ನು ನೀಡಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರೂ ಜೊತೆಗಿದ್ದರು.