ತಿರುವನಂತಪುರ: ಮಕ್ಕಳ ಲೈಂಗಿಕ ದೃಶ್ಯಗಳನ್ನು ಹರಡುವವರನ್ನು ಪತ್ತೆಹಚ್ಚಲು ಪೆÇಲೀಸರು ಎಲ್ಲಾ ಜಿಲ್ಲೆಗಳಲ್ಲಿ ತಪಾಸಣೆ ಚುರುಕುಗೊಂಡಿದೆ. ತಪಾಸಣೆ ಆಪರೇಷನ್ ಪಿ ಹಂಟ್‍ನ ಭಾಗವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದಾಳಿ ಮುಂದುವರೆದಿದೆ. ತಿರುವನಂತಪುರ ನಗರದಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಕೊಟ್ಟಾಯಂ ಜಿಲ್ಲೆಯಲ್ಲಿ 20 ಪ್ರಕರಣಗಳು ದಾಖಲಾಗಿವೆ. ನಾಲ್ಕು ಜನರನ್ನು ಬಂಧಿಸಲಾಗಿದೆ. ಎರ್ನಾಕುಳಂ ಜಿಲ್ಲೆಯಲ್ಲಿ ಆರು ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ.
ಆಪರೇಷನ್ ಪಿ ಹಂಟ್ ರಾಜ್ಯ ಪೆÇಲೀಸರು ಮತ್ತು ಸೈಬರ್ ಸೆಲ್ ಒಳಗೊಂಡ ತಂಡದಿಂದ ಒಂದು ತಿಂಗಳ ಕಾಲ ನಡೆಯುವ ಸೈಬರ್ ಕಾರ್ಯಾಚರಣೆಯಾಗಿದೆ. ಮಕ್ಕಳ ಅಶ್ಲೀಲತೆಯನ್ನು ಹರಡುವ ಸೈಬರ್ ಲಿಂಕ್‍ಗಳನ್ನು ಕಂಡುಹಿಡಿಯಲು ಕೇರಳ ಪೋಲೀಸರು ಈ ವಿಶೇಷ ಕಾರ್ಯಾಚರಣೆಯನ್ನು ಪ್ರಾರಂಭಿಸಿರುವರು.