HEALTH TIPS

ಶಬರಿಮಲೆ : ಕೇರಳ ಸರ್ಕಾರದ ಆದೇಶವನ್ನು ಅಯ್ಯಪ್ಪ ಭಕ್ತರಿಗೆ ಅಂಗೀಕರಿಸಲು ಸಾಧ್ಯವಿಲ್ಲ : ರಾಜನ್ ಮುಳಿಯಾರು

 

        ಕಾಸರಗೋಡು: ಶಬರಿಮಲೆ ಸನ್ನಿಧಾನಕ್ಕೆ ಹೋಗುವ ಅಯ್ಯಪ್ಪ ಭಕ್ತರು ಪಂಪಾ ನದಿಯಲ್ಲಿ ಮುಳುಗಿ ಸ್ನಾನ ಮಾಡಬಾರದು ಮತ್ತು ತುಪ್ಪಾಭಿಷೇಕ ಮಾಡಬಾರದು ಎಂಬ ಕೇರಳ ಸರ್ಕಾರದ ಆದೇಶವನ್ನು ಅಯ್ಯಪ್ಪ ಭಕ್ತರಿಗೆ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಕೇರಳ ಹಿಂದು ಐಕ್ಯವೇದಿಕೆಯ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು ಹೇಳಿದ್ದಾರೆ.

     ಕೇರಳ ಸರ್ಕಾರವು ಅಯ್ಯಪ್ಪ ಭಕ್ತರೊಂದಿಗೆ ತೋರುವ ನಿಷೇಧಾತ್ಮಕ ನಿಲುವು ಹಾಗೂ ಆಚಾರ ಅನುಷ್ಠಾನಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಶಬರಿಮಲೆ ಅಯ್ಯಪ್ಪ  ಸೇವಾ ಸಮಾಜಂ ಕೇರಳ ರಾಜ್ಯ ವ್ಯಾಪಕವಾಗಿ ನಡೆಸುವ ಶಬರಿಮಲೆ ಆಚಾರ ಅನುಷ್ಠಾನ ಸಂರಕ್ಷಣಾ ನಾಮಜಪ ಯಜ್ಞದ ಅಂಗವಾಗಿ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಸರಗೋಡು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಜರಗಿದ ನಾಮಜಪ ಯಜ್ಞವನ್ನು ಉದ್ಘಾಟಿಸಿದ ಬಳಿಕ ಪ್ರಧಾನ ಭಾಷಣಗೈದು ಅವರು ಮಾತನಾಡಿದರು.

     ಶಬರಿಮಲೆಗೆ ತೆರಳುವ ಭಕ್ತಾದಿಗಳು ಪಂಪಾ ನದಿಯಲ್ಲಿ ಮುಳುಗಿ ಬಲಿತರ್ಪಣೆ ಮಾಡಬೇಕು ಹಾಗೂ ತುಪ್ಪಾಭಿಷೇಕ ಮಾಡಬೇಕೆಂಬುವುದು ಅಯ್ಯಪ್ಪ ಭಕ್ತರ ವಾಡಿಕೆಯಾಗಿದೆ. ಆದರೆ ಕೇರಳ ಸರಕಾರ ಮಾತ್ರ ಈ ಆಚರಣೆಗೆ ನಿರ್ಬಂಧ ಹೇರಿದೆ. ಕೊರೊನಾದ ಹೆಸರಲ್ಲಿ 20 ಜನಕ್ಕಿಂತ ಅಧಿಕ ಮಂದಿ ಗುಂಪು ಸೇರಬಾರದೆಂಬುವುದು ಕೇರಳ ಸರ್ಕಾರದ ಮಾನದಂಡವಾಗಿದೆ. ಆದರೆ ಇದೇ ಸರ್ಕಾರವು ಈ ಮಾನದಂಡವನ್ನು ಉಲ್ಲಂಘಿಸಿ ಸಾವಿರ ಮಂದಿ ಅಯ್ಯಪ್ಪ ಭಕ್ತರಿಗೆ ಶಬರಿಮಲೆಗೆ ತೆರಳಲು ಅನುವು ಮಾಡಿದೆ. ಸರಕಾರದ ಬೊಕ್ಕಸಕ್ಕೆ ಹಣ ತುಂಬಿಸುವುದೇ ಸರಕಾರದ ಉದ್ದೇಶವಾಗಿದೆ. ಶಬರಿಮಲೆಯ ಆಚಾರ ಅನುಷ್ಠಾನಗಳನ್ನು ನಿರ್ಮೂಲನಗೊಳಿಸುವ ಕೇರಳ ಸರ್ಕಾರದ ಮತ್ತು ದೇವಸ್ವಂ ಮಂಡಳಿಯ ಯತ್ನವನ್ನು ಸಹಿಸಲು ನಮ್ಮಿಂದ ಎಂದಿಗೂ ಸಾಧ್ಯವಿಲ್ಲ ಎಂದು ರಾಜನ್ ಮುಳಿಯಾರು ಹೇಳಿದರು.

     ಅಯ್ಯಪ್ಪ ಸೇವಾ ಸಮಾಜಂ ಇದರ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಸರೋಜಿನಿ, ಶೋಭಾ, ಲೀಲಾ, ಪ್ರಮೋದ್, ಮನೋಹರ ಶೆಟ್ಟಿ, ರೋಹಿತಾಕ್ಷನ್ ಮತ್ತಿತರರು ಪ್ರತಿಭಟನೆಗೆ ನೇತೃತ್ವ ನೀಡಿದರು. ಟಿ.ರಾಧಾಕೃಷ್ಣನ್ ಸ್ವಾಗತಿಸಿ, ಹರೀಶ್ ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries