HEALTH TIPS

ಕಂಡುಬಂದ ಚುನಾವಣಾ ಸಂಭ್ರಮದ ಲಾಭ ಎಲ್‍ಡಿಎಫ್ ಗೆ

        ಕೋಝಿಕ್ಕೋಡ್: ಯುಡಿಎಫ್-ವಲ್ಪೇರ್ ಪಕ್ಷದ ಮೈತ್ರಿಯಿಂದ ಬಿಜೆಪಿ ಲಾಭ ಗಳಿಸಲಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎ ವಿಜಯರಾಘವನ್ ಹೇಳಿದ್ದಾರೆ. ಈ ಮೈತ್ರಿ ಬಹುಸಂಖ್ಯಾತ ಕೋಮುವಾದವನ್ನು ಉತ್ತೇಜಿಸಲು ಮಾತ್ರ ನೆರವಾಗುತ್ತದೆ. ಜಮಾತ್-ಎ-ಇಸ್ಲಾಮಿಯವು ಇನ್ನು ರಾಜ್ಯದಲ್ಲಿ ಗೆಲ್ಲುವುದಿಲ್ಲ ಎಂದು ಖಾತ್ರಿಯಾದಾಗ ಯುಡಿಎಫ್ ರ್ಯಾಲಿ ಮಾಡಿತು. ಜಮಾಅತೆ ಇಸ್ಲಾಮಿಯೊಂದಿಗಿನ ಈ ಸಂಪರ್ಕದಿಂದ ಕಾಂಗ್ರೆಸ್ ಪತನ ಪೂರ್ಣಗೊಳ್ಳಲಿದೆ ಎಂದು ಅವರು ಕೋಝಿಕ್ಕೋಡ್ ಚುನಾವಣಾ ರ್ಯಾಲಿಯಲ್ಲಿ ಆರೋಪಿಸಿದರು.

       ಜಮತ್-ಎ-ಇಸ್ಲಾಮಿ ವೆಲ್ಪೇರ್ ಪಕ್ಷ ರಚನೆ ಕೇರಳಕ್ಕೆ ಯಾವುದೇ ಒಳ್ಳೆಯದನ್ನು ಮಾಡಿಲ್ಲ ಎಂದು ವಿಜಯರಾಘವನ್ ಆರೋಪಿಸಿದರು. ಶಾಂತಿ ಪ್ರಿಯ ಮುಸ್ಲಿಂ ಸಮುದಾಯವು ವೆಲ್ಪೇರ್ ನ ಯುಡಿಎಫ್ ಮೈತ್ರಿಯನ್ನು ಸ್ವೀಕರಿಸುವುದಿಲ್ಲ. ತನ್ನ ಬೂತ್‍ನಲ್ಲಿ ಮತದಾನ ಯಂತ್ರದಲ್ಲಿ ಕೈ ಚಿಹ್ನೆ ಇದ್ದರೂ ಬೇರೆ ಚಿಹ್ನೆಯ ಮೇಲೆ ಮತ ಚಲಾಯಿಸಿದ ಮೊದಲ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಎಂದು ವಿಜಯರಾಘವನ್ ಕುಟಿಕಿದ್ದಾರೆ.

         ಯುಡಿಎಫ್ ಕನ್ವೀನರ್ ಆಗಿ ಎಂ.ಎಂ ಹಸನ್ ಮಾಡಿದ ಮೊದಲ ಕೆಲಸವೆಂದರೆ ಜಮಾತ್-ಎ-ಇಸ್ಲಾಮಿಯದ ಬಾಗಿಲು ತಟ್ಟಿರುವುದು ಮಾತ್ರವಾಗಿದೆ. ಇದು ರಾಜಕೀಯ ಸಭ್ಯತೆಯಲ್ಲ ಎಂದು ಗುರುತಿಸಬೇಕು. ಯುಡಿಎಫ್ ತನ್ನ ನೀತಿಯನ್ನು ಜನರಿಗೆ ಬಹಿರಂಗವಾಗಿ ಹೇಳಲಾಗದ ಸ್ಥಿತಿಯಲ್ಲಿದೆ. ನಿರಂತರತೆಯನ್ನು ಇಲ್ಲವಾಗಿಸುವುದು ಕೇಂದ್ರ ತನಿಖಾ ಸಂಸ್ಥೆಗಳ ಗುರಿ. ಈ ಉದ್ದೇಶಕ್ಕಾಗಿ ತನಿಖೆಯನ್ನು ನಿಧಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

    ಅದೇ ವೇಳೆ  ಕೋವಿಡ್ ಕಾಲದಲ್ಲಿ ನಡೆದ ಚುನಾವಣಾ ಸಂಭ್ರಮದಿಂದ ಎಲ್‍ಡಿಎಫ್ ಪ್ರಯೋಜನ ಪಡೆಯಲಿದೆ ಎಂದು ಎ. ವಿಜಯರಾಘವನ್ ಹೇಳಿದ್ದಾರೆ. ಬದಲಾಗುತ್ತಿರುವ ರಾಜಕೀಯವನ್ನು ತಿಳಿದು ಜನರು ಮತ ಚಲಾಯಿಸುತ್ತಾರೆ. ಜನರು ಎಡಪಂಥೀಯರಿಗೆ ಎಂದಿಗೂ ಬೆಂಬಲ ನೀಡುತ್ತಾರೆ. ಎಡಪಂಥೀಯರು ಭಾರಿ ಲಾಭ ಗಳಿಸಲಿದ್ದಾರೆ. ತಿರುವನಂತಪುರದಲ್ಲಿ ಬಿಜೆಪಿ ಕಳೆದ ಬಾರಿಗೆ ಗಳಿಸಿಸದ ಮತಕ್ಕಿಂತ ಭಾರೀ ಕುಸಿತ ಈಬಾರಿ ಅನುಭವಿಸಲಿದೆ. ವಿಧಾನಸಭಾ ಚುನಾವಣೆಯಲ್ಲಿ ಜನರು ಹೇಗೆ ಯೋಚಿಸುತ್ತಿದ್ದಾರೆ ಎಂಬುದರ ಸೂಚನೆಯಾಗಿದೆ ಇಂದು ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries