ಕೊಲ್ಲಂ: ಮತದಾನ ಕೇಂದ್ರಕ್ಕೆ ತಲುಪಿದ ವೃದ್ಧೆಯೊಬ್ಬಳು ತನ್ನ ಕೈಗಳನ್ನು ಸೋಂಕುನಿವಾರಕಗೊಳಿಸಲು ಒದಗಿಸಿದ ಸ್ಯಾನಿಟೈಜರ್ ಅನ್ನು ಸೇವಿಸಿದ ಘಟನೆ ನಡೆದಿದೆ.
ಕೊಲ್ಲಂನ ಆಲಪ್ಪುಳ ಎಲ್‍ಪಿ ಶಾಲೆಯಲ್ಲಿ ಮತ ಚಲಾಯಿಸಲು ಬಂದ ವೃದ್ಧೆಯೊಬ್ಬರು ಸ್ಯಾನಿಟೈಜರ್ ಕುಡಿದು ಆತಂಕ ಸೃಷ್ಟಿಸಿದರು. ಮಂಗಳವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ವೃದ್ಧ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೃದ್ಧೆ ಆಕಸ್ಮಿಕವಾಗಿ ಕೈ ಸ್ವಚ್ಚಗೊಳಿಸಲು ನೀಡಿದ ಸ್ಯಾನಿಟೈಜರ್ ಕುಡಿದರು ಎಂದು ವರದಿಯಾಗಿದೆ. ವಯಸ್ಸಾದ ಮಹಿಳೆಗೆ ಸ್ಯಾನಿಟೈಜರ್ ಏನು ಎಂದು ತಿಳಿದಿಲ್ಲ ಎಂದು ವರದಿಯಾಗಿದೆ. ಸ್ಯಾನಿಟೈಜರ್ ಕುಡಿದಿರುವುದು ಗಮನಕ್ಕೆ ಬಂದ ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.