ಕುಂಬಳೆ: ಸುಭಿಕ್ಷ ಕೇರಳ ಯೋಜನೆಯ ಅಂಗವಾಗಿ ತುಳುನಾಡು ಫಾರ್ಮರ್ಸ್ ವೆಲ್ಪೇರ್ ಕೋಪರೇಟಿವ್ ಸೊಸೈಟಿ ನಡೆಸಿದ ಭತ್ತ ಕೃಷಿಯಿಂದ ಲಭಿಸಿದ ಅಕ್ಕಿಯನ್ನು ತುಳುನಾಡು ಬ್ರಾಂಡ್ ಹೆಸರಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಗಿದೆ.
ಸಂಘದ ಅಧ್ಯಕ್ಷ ನ್ಯಾಯವಾದಿ ಸಿ.ಎಚ್.ಕುಂಞಂಬು ಅವರು ಕುಂಬಳೆಯ ಹಿರಿಯ ಉದ್ಯಮಿ ಸುಧೀರ್ ಕುಮಾರ್ ಪೈ ಅವರಿಗೆ ನೀಡಿ ಬ್ರಾಂಡ್ ಉದ್ಘಾಟಿಸಿದರು. ಪೋಲೀಸ್ ಅಧಕಾರಿಗಳಾದ ರಾಜಗೋಪಾಲ್, ಸುನಿಲ್ ಕುಮಾರ್, ಕೃಷಿ ಅಧಿಕಾರಿ ನಾಣು ಕುಟ್ಟನ್, ಅಗ್ರಿಕಲ್ಚರ್ ಸೊಸೈಟಿ ಅಧ್ಯಕ್ಷ ಕೃಷ್ಣ ಚೆಟ್ಟಿಯಾರ್, ನಿರ್ದೇಶಕರಾದ ಸುಬೈರ್, ಸುಬ್ಬಣ್ಣ ಆಳ್ವ, ಜಗನ್ನಾಥ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಕೃಷಿಕರಾದ ರಾಮಚಂದ್ರ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ರಾಜು ಸ್ಟೀಪನ್ ಸ್ವಾಗತಿಸಿ, ವಂದಿಸಿದರು.