HEALTH TIPS

ಗೋಳ್ವಲ್ಕರ್ ಹೆಸರನ್ನು ಏಕೆ ನೀಡಬಾರದು?- ವೈರಲ್ ಆದ ಎಂ.ಬಿ ರಾಜೇಶ್ ಅವರ ಪೋಸ್ಟ್

                

        ತಿರುವನಂತಪುರ: ತಿರುವನಂತಪುರದ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ (ಆರ್‍ಜೆಸಿಬಿ) ಯ ಹೊಸ ಕ್ಯಾಂಪಸ್‍ಗೆ ಆರ್ ಎಸ್ ಎಸ್ ನ ಸರ ಸಂಘ ಚಾಲಕರಾಗಿದ್ದ ಎಂ.ಎಸ್.ಗೋಳ್ವಲ್ಕರ್(ಗುರೂಜಿ) ಅವರ ಹೆಸರನ್ನು ಇರಿಸುವ ನಿರ್ಧಾರ ಇದೀಗ ವಿವಾದಕ್ಕೆ ನಾಂದಿ ಹಾಡಿದೆ.

        ಸಿಪಿಎಂ ಮತ್ತು ಕಾಂಗ್ರೆಸ್‍ಜೊತೆಯಾಗಿ ಈ ಬಗ್ಗೆ ಕೇಂದ್ರ ಸರ್ಕಾರದೊಂದಿಗೆ ತಮ್ಮ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ನಿರ್ಧಾರವನ್ನು ಹಿಫಡೆಯಬೇಕೆಂದು ಒತ್ತಾಯಿಸಿವೆ. ವಿವಾದಾತ್ಮಕ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. 

       ಭಾರತದ ಸರ್ವಧರ್ಮ ಕಲ್ಪನೆಯನ್ನು ನಾಶಮಾಡುವ ಮತ್ತು ಅನಾಗರಿಕ ಧಾರ್ಮಿಕ ರಾಜ್ಯದ ಪರಿಕಲ್ಪನೆಯನ್ನು ವಾಸ್ತವವಾಗಿಸುವ ಪ್ರಯತ್ನಗಳಿಗೆ ಗೋಳ್ವಲ್ಕರ್ ಕಾರಣ ಎಂದು ಸಿಪಿಎಂ ನಾಯಕ ಎಂಬಿ ರಾಜೇಶ್ ಹೇಳಿದ್ದಾರೆ. ಅವರ ಪ್ರತಿಕ್ರಿಯೆ ಫೇಸ್‍ಬುಕ್ ಪೆÇೀಸ್ಟ್ ಮೂಲಕ ವ್ಯಕ್ತವಾಗಿದೆ. ಗೋಳ್ವಲ್ಕರ್ ಅವರ ಹೆಸರನ್ನು ಕ್ಯಾಂಪಸ್‍ನಲ್ಲಿ ಏಕೆ ಇರಿಸಬಾರದು ಎಂಬ ಶೀರ್ಷಿಕೆಯಲ್ಲಿ ಸುಧೀರ್ಘ ಬರಹವಿದೆ. 

           ಫೇಸ್‍ಬುಕ್‍ನ ಪೂರ್ಣ ಆವೃತ್ತಿ:

   ತಿರುವನಂತಪುರಂನ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದ ಎರಡನೇ ಕ್ಯಾಂಪಸ್‍ಗೆ ಗೋಳ್ವಲ್ಕರ್ ಹೆಸರಿಡಬಾರದು ಏಕೆ?

1. ಗೋಳ್ವಲ್ಕರ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರಲ್ಲ. ಮತ್ತು ಸ್ವಾತಂತ್ರ್ಯದ ನಂತರ ಆಧುನಿಕ ಭಾರತದ ನಿರ್ಮಾಣಕ್ಕೆ ಸಹಕರಿಸಲಿಲ್ಲ, ಆದರೆ ಭಾರತದ ಕಲ್ಪನೆಯನ್ನು ನಾಶಮಾಡುವ ಮತ್ತು ಪಕ್ಕಾ ಧಾರ್ಮಿಕ ರಾಷ್ಟ್ರದ ಪರಿಕಲ್ಪನೆಯನ್ನು ವಾಸ್ತವವಾಗಿಸುವ ಪ್ರಯತ್ನಗಳಿಗೆ ಕಾರಣವಾದರು.

2. ಸ್ವಾತಂತ್ರ್ಯವು ಹಿಂದೂ ರಾಷ್ಟ್ರವಾದಲ್ಲಿ ಮಾತ್ರ ಸಾಕಾರ ಮತ್ತು ಅದು ಅಲ್ಲಿಯವರೆಗೆ ಪರಕೀಯವೆ ಎಂದು ಘೋಷಿಸಿದವರು.

3. ಸ್ವಾತಂತ್ರ್ಯ ಹೋರಾಟದ ಫಲವಾಗಿ ರೂಪುಗೊಂಡ ಸಂವಿಧಾನವನ್ನು ಅವರು ಹಿಂದೂ ವಿರೋಧಿ ಮತ್ತು ಭಾರತೀಯ ವಿರೋಧಿ ಎಂದು ತಿರಸ್ಕರಿಸಿದ್ದರು.

4. ಸಂವಿಧಾನದ 4 ನೇ ಭಾಗ, ವಿಧಿ 51 - ಎ (ಎಚ್) ಹೀಗೆ ಹೇಳುತ್ತದೆ:

     "ವಿಜ್ಞಾನ, ಮಾನವೀಯತೆ, ವಿಚಾರಣೆಯ ಪ್ರಜ್ಞೆ ಮತ್ತು ಸುಧಾರಣೆಯ ಪ್ರಜ್ಞೆಯನ್ನು ಬೆಳೆಸುವುದು ನಾಗರಿಕರ ಮೂಲಭೂತ ಕರ್ತವ್ಯವಾಗಿದೆ. ಗೋಳ್ವಲ್ಕರ್ ವೈಜ್ಞಾನಿಕ ಪ್ರಜ್ಞೆ, ಮಾನವತಾವಾದ, ಮುಕ್ತ ಚಿಂತನೆಗಳ ವಿರುದ್ದದವರಾಗಿದ್ದು ಸಿದ್ಧಾಂತವಾದಿ.

5. ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಕಮ್ಯುನಿಸ್ಟರು ಹಿಂದೂ ರಾಷ್ಟ್ರದ ಆಂತರಿಕ ಶತ್ರುಗಳೆಂದು ಅವರು ಘೋಷಿಸಿದರು (ವಿಚಾರಧಾರ - ಗೋಳ್ವಲ್ಕರ್, 6 ನೇ ಆವೃತ್ತಿ, ಕುರುಕ್ಷೇತ್ರ ಪ್ರಕಾಶ, ಪುಟಗಳು 217-242).

6. "ನಾವು ಅಥವಾ ನಮ್ಮ ರಾಷ್ಟ್ರವನ್ನು ವ್ಯಾಖ್ಯಾನಿಸಿದ್ದೇವೆ, ಎಂ.ಎಸ್. ಗೋಳ್ವಲ್ಕರ್, ಭಾರತ್ ಪಬ್ಲಿಕೇಶನ್ಸ್, ಪುಟ 35" ಹಿಂದೂಗಳಲ್ಲದವರಿಗೆ "ನಾಗರಿಕ ಹಕ್ಕುಗಳನ್ನು" ಸಹ ನೀಡಬಾರದು, "ಸೆಮಿಟಿಕ್ ಜನಾಂಗಗಳನ್ನು ನಿರ್ಮೂಲನೆ ಮಾಡುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದ ಮತ್ತು ಜನಾಂಗೀಯ ಹೆಮ್ಮೆಯ ಪರಾಕಾಷ್ಠೆಯನ್ನು ತಲುಪಿದ ಜರ್ಮನಿಯ ಲಾಭವನ್ನು ಪಡೆಯಲು ಹಿಂದೂಸ್ತಾನಕ್ಕೆ ಉತ್ತಮ ನಿದರ್ಶನವಿದೆ." ಪುಟ 48 ರಂತಹ ವಿವಿಧ ಅಭಿಪ್ರಾಯಗಳ ಮೂಲಕ ಧಾರ್ಮಿಕ ರಾಜಕಾರಣದ ದ್ವೇಷದ ಸಿದ್ಧಾಂತವನ್ನು ಅವರು ಪ್ರಚಾರ ಮಾಡಿದರು ಮತ್ತು ಭಾರತವನ್ನು ಆಳವಾಗಿ ವಿಭಜಿಸಿದ್ದಾರೆ.ಅವರ ಪುಸ್ತಕಗಳು ಮತ್ತು ಭಾಷಣಗಳು ದ್ವೇಷ ಸಿದ್ಧಾಂತದ ಬೀಜಕಣಗಳಾಗಿವೆ.

6. ಇದರ ಜೊತೆಗೆ  ಮಹಾತ್ಮ ಗಾಂಧಿಯವರ ಹತ್ಯೆಯ ಹಿನ್ನೆಲೆಯಲ್ಲಿ ಸರ್ದಾರ್ ಪಟೇಲ್ ಆರ್ ಎಸ್ ಎಸ್ ನ್ನು ನಿಷೇಧಿಸಿದಾಗ, ಅಂದು ಅದರ ನಾಯಕರಾಗಿದ್ದವರು ಗೋಳ್ವಲ್ಕರ್. ಗಾಂಧೀಜಿಯವರ ಹತ್ಯೆಗೆ ಎರಡು ವಾರಗಳ ಮೊದಲು, ತಿರುವನಂತಪುರಂನ ಪುಟ್ಟರಿಕಂಡಂನಲ್ಲಿ, ಗಾಂಧೀಜಿಯವರ ಬಗ್ಗೆ ಅವಮಾನಕರವಾಗಿ ಮಾತನಾಡಿದದ್ದರು. ಒಎನ್‍ವಿ ಮತ್ತು ಮಲಯಟ್ಟೂರ್ ಈ ಬಗ್ಗೆ  ಪ್ರಶ್ನಿಸಿದಾಗ, ಮಹಾನ್ ಕವಿ ಒಎನ್‍ವಿಯನ್ನು ಆರ್‍ಎಸ್‍ಎಸ್ ಸ್ವಯಂಸೇವಕರು ಗೋಳ್ವಲ್ಕರ್ ಎದುರು ಹೊಡೆದಿದ್ದರು. ಸಂದರ್ಶನದಲ್ಲಿ ನೀವು ಹೇಳಿದ್ದನ್ನು ನೆನಪಿಡಿ. (ಕಲಾ ಕೌಮುಡಿ, 1992)

        ಅಂತಹ ವ್ಯಕ್ತಿಯ ಹೆಸರನ್ನು ರಾಷ್ಟ್ರೀಯ ಸಂಸ್ಥೆಗೆ ಕೊಡುವುದು ಅನ್ಯಾಯ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಿನ ಸಂಶೋಧನಾ ಸಂಸ್ಥೆಯ ಎರಡನೇ ಕ್ಯಾಂಪಸ್‍ಗೆ ವಿಶೇಷ ಹೆಸರನ್ನು ನೀಡಬೇಕಾದರೆ, ಶ್ರೇಷ್ಠ ವಿಜ್ಞಾನಿ ಡಾ. ಪುಷ್ಪಾ ಎಂ. ಭಾರ್ಗವ್ ಅವರ ಹೆಸರಾಗಬಹುದು.  ಅವರನ್ನು ಭಾರತೀಯ ಜೀವಶಾಸ್ತ್ರದ ಪಿತಾಮಹ ಎಂದು ಕರೆಯಲಾಗುತ್ತದೆ.

        ಮುಕ್ತಾಯ: ಶ್ವೇತ ಕ್ರಾಂತಿಯ ಪಿತಾಮಹ ವರ್ಗೀಸ್ ಕುರಿಯನ್ ಅವರು ಡಾ.ಪುಷ್ಪಾ ಎಂ ಭಾರ್ಗವ್ ಅವರ ಬಗ್ಗೆ ಬರೆದಿದ್ದಾರೆ, ಗೋಳ್ವಲ್ಕರ್ ಅವರನ್ನು ಸಭೆಯೊಂದರಲ್ಲಿ ವರ್ಗೀಸ್ ಕುರಿಯನ್ ಅವರು ನೇರವಾಗಿ  ಹಾಲು ಕುಡಿಯುವುದು ಸರಿಯಲ್ಲ ಏಕೆಂದರೆ ಹಸುವಿನ ಮಾಂಸ ಮತ್ತು ಹಾಲು ಒಂದೇ ಜೈವಿಕ ಪ್ರಕ್ರಿಯೆಯಿಂದ ರೂಪುಗೊಳ್ಳುತ್ತದೆ  ಎಂದದ್ದಕ್ಕೆ "ಎಲ್ಲವೂ ರಾಜಕೀಯವಲ್ಲವೇ?" ಎಂದು ಗೋಳ್ವಲ್ಕರ್ ವಿವಾದದಿಂದ ಹಿಂದೆ ಸರಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries