ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಸುರಕ್ಷೆ-ಕಾನೂನು ಪಾಲನೆ ಪ್ರಕ್ರಿಯೆಗಳ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲೆಯ ಎಲ್ಲ ಪೋಲೀಸ್ ಸಿಬ್ಬಂದಿಗೆ ತರಬೇತಿ ಆರಂಭಗೊಂಡಿದೆ.
ಪಾರೆಕಟ್ಟೆಯ ಜಿಲ್ಲಾ ಪೋಲೀಸ್ ಕೇಂದ್ರದಲ್ಲಿ ವಿವಿಧ ರೀತಿಯ ಗ್ರನೈಡ್ ಪ್ರಯೋಗ ಸಹಿತ 2 ದಿನಗಳ ತರಬೇತಿ ಇದೀಗ ಆರಮಭಗೊಂಡಿದೆ. ಡೈಮಾರ್ಕರ್ ಗ್ರನೇಡ್, ಟಿಯರ್ ಸ್ಮೋಕ್ ಗ್ರನೇಡ್, ಟಿಯರ್ ಸ್ಮೋಕ್ಷೆನ್, ಸ್ಟೋನ್ ಸ್ಟೆನ್ಸ್ಟನ್ ಗ್ರನೇಡ್ ಇತ್ಯಾದಿ 485 ವಿಧದ ಗ್ರೆನೆಡ್ ಪ್ರಯೋಗಗಳ ಬಗ್ಗೆ ತರಬೇತಿ ಜರುಗುತ್ತಿದೆ. ಡಿ.ವೈ.ಎಸ್.ಪಿ. ಯಿಂದ ನಾಗರೀಕ ಪೆÇಲೀಸ್ ಅಧಿಕಾರಿ ಶ್ರೇಣಿ ವರೆಗಿನ ಸಿಬ್ಬಂದಿಗೆ ತರಬೇತಿ ಒದಗಿಸಲಾಗುತ್ತಿದೆ. ಪೆÇಲೀಸ್ ಠಾಣೆಗಳಲ್ಲಿ ದಾಸ್ತಾನು ಇರಿಸಲಾಗಿರುವ ಕಾಲಾವಧಿ ಮುಗಿದಿರುವ ಎಲ್ಲ ಗ್ರೆನೆಡ್ ಗಳನ್ನು ನಶೀಕರಿಸಿ, ನೂತನ ಗ್ರೆನಡ್ ಗಳನ್ನು ವಿತರಿಸಲಾಯಿತು.