ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಕಡಂಬಾರ್ ಡಿವಿಷನ್ ನಿಂದ ಸ್ಪರ್ಧಿಸಿ ವಿಜಯಿಯಾದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಪಟ್ಟಿಲ್ತಾಡಿ ಯವರ ನೇತೃತ್ವದಲ್ಲಿ ಸ್ವ-ಗೃಹದಲ್ಲಿ ಸೋಮವಾರ ಅಪರಾಹ್ನ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಓಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ ವಹಿಸಿದ್ದರು. ಈ ವೇಳೆ ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಹರೀಶ್ಚಂದ್ರ ಮಂಜೇಶ್ವರ, ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ, ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ, ಓಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಪುಷ್ಪರಾಜ್ ಕೆ. ಐಲ, ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಕಡಂಬಾರ್ ಭಂಡಾರಮನೆ, ತ್ರಿಸ್ತರ ಚುನಾವಣೆಯಲ್ಲಿ ವಿಜಯಿಯಾದ ಪಂಚಾಯತಿ, ಬ್ಲಾಕ್, ಅಭ್ಯರ್ಥಿಗಳು, ಅಲ್ಲದೆ ಸ್ಪರ್ಧಿಸಿದ ಅಭ್ಯರ್ಥಿಗಳು, ಅಹೋರಾತ್ರಿ ದುಡಿದ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ವೇಳೆ ವಿಜಯಿಯಾದ ಅಶ್ವಿನಿ ಪಟ್ಟಿಲ್ತಾಡಿಯವರನ್ನ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು.