ತಿರುವನಂತಪುರ: ಎಸ್‍ಎಸ್‍ಎಲ್‍ಸಿ ಮತ್ತು ಪ್ಲಸ್ ಟು ಪರೀಕ್ಷೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಆಯ್ಕೆಮಾಡಿ ಸ್ಪಷ್ಟವಾಗಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸುವ ವಿಶಿಷ್ಟ ಅವಕಾಶವನ್ನು ಈಬಾರಿ ಕಲ್ಪಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ ಪ್ರಶ್ನೆಗಳನ್ನು ಅನುಮತಿಸಲಾಗುವುದು. ಪರೀಕ್ಷೆಯ ಸಮಯವನ್ನು ವಿಸ್ತರಿಸಲಾಗುವುದು. ಹೆಚ್ಚುವರಿ ಸಮಯ ಅನುಮತಿಯಿಂದ ಪ್ರಶ್ನೆಗಳನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಈ ಮೂಲಕ ಅನುಕೂಲಕರವಾಗಲಿದೆ.
ಜನವರಿ 1 ರಿಂದ ಶಿಫ್ಟ್ ಆಧಾರದ ಮೇಲೆ ತರಗತಿಗಳು ನಡೆಯಲಿವೆ. ಮಾರ್ಚ್ 16 ರವರೆಗೆ ತರಗತಿಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಯಾವ ಪಾಠದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂಬುದನ್ನು ಈ ತಿಂಗಳ 31 ರೊಳಗೆ ಪ್ರಕಟಿಸಲಾಗುವುದು. ಲಿಖಿತ ಪರೀಕ್ಷೆಯ ನಂತರ ಪ್ರಾಯೋಗಿಕ ಪರೀಕ್ಷೆಗೆ ಒಂದು ವಾರ ನಿಗದಿಪಡಿಸಲಾಗಿದೆ.