ಕಾಸರಗೋಡು: ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳ ಮತ್ತು ಇನ್ನಿತರ ವ್ಯಕ್ತಿಗಳ ತೇಜೋವಧೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಚುನಾವಣೆ ಕಮೀಷನರ್ ವಿ.ಭಾಸ್ಕರನ್ ತಿಳಿಸಿರುವರು. ಆನ್ ಲೈನ್ ಪ್ಲಾಟ್ ಫಾರಂ ಗಳ ಮೂಲಕ ನಡೆಸುವ ಇಂಥಾ ಅಪಪ್ರಚಾರಗಳು ಅಪರಾಧವಾಗಿದ್ದು, ಖಾಸಗಿ ಬದುಕಿನ ಮೇಲೆ ಹಾನಿ ನಡೆಸುವಂಥಾ ಕ್ರಮಸಲ್ಲದು. ಸಾಕ್ಷ್ಯಾಧಾರಗಳಿಲ್ಲದ ಆರೋಪಗಳನ್ನು ನಡೆಸಕೂಡದು. ಇತರ ಪಕ್ಷಗಳ ಬಗ್ಗೆ ಟೀಕೆ ನಡೆಸುವ ಸಂದರ್ಭಗಳಲ್ಲಿ ಅವರ ನೀತಿಗಳ ಬಗ್ಗೆ ಮಾತ್ರ ವಿಮರ್ಶೆ ನಡೆಸಬೇಕು ಎಂದವರು ತಿಳಿಸಿದರು.