ತಿರುವನಂತಪುರ: ವಿಶೇಷ ವಿಧಾನಸಭೆ ಅಧಿವೇಶನ ನಡೆಸುವ ತುರ್ತುಸ್ಥಿತಿಯನ್ನು ಮನವರಿಕೆ ಮಾಡಲಾಗಿದೆ ಮತ್ತು ಶೀಘ್ರ ಅನುಮತಿಯೂ ಲಭಿಸಲಿದೆ ಎಂದು ಕಾನೂನು ಸಚಿವ ಎ.ಕೆ.ಬಾಲನ್ ಹಾಗೂ ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ದಾರೆ. ಶುಕ್ರವಾರ (ಇಂದು) ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.
ವಿಧಾನಸಭೆಗೆ ಅನುಮತಿ ನೀಡುವ ಬಗ್ಗೆ ರಾಜ್ಯಪಾಲರು ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ ಎಂದು ತಿಳಿದುಬಂದಿದೆ. ರಾಜಿ ಸಂಧಾನಕ್ಕಾಗಿ ರಾಜಭವನಕ್ಕೆ ಬಂದ ಮಂತ್ರಿಗಳ ಮುಂದೆ ಸರ್ಕಾರದ ಕ್ರಮಗಳ ಬಗ್ಗೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದರು.
ಎರಡು ವಿನಂತಿಗಳ ಹೊರತಾಗಿಯೂ, ಸರ್ಕಾರವು ತುರ್ತು ಪರಿಸ್ಥಿತಿಯನ್ನು ವಿವರಿಸಲು ಸಾಧ್ಯವಾಗಿಲ್ಲ. ಮತ್ತು ಪೋಲೀಸ್ ತಿದ್ದುಪಡಿ - ಸ್ಥಳೀಯ ವಾರ್ಡ್ ವಿಭಜನೆ ಸುಗ್ರೀವಾಜ್ಞೆಗೆ ಸಹಿ ಹಾಕಿದ ಬಳಿಕ ಸರ್ಕಾರದ ಉದ್ದೇಶ ಬದಲಾಗಿರುವ ಬಗ್ಗೆ ರಾಜ್ಯಪಾಲರು ನೆನಪಿಸಿದರು. ಪೌರತ್ವ ಕಾನೂನಿನ ವಿರುದ್ಧ ನ್ಯಾಯಾಲಯವನ್ನು ಸಂಪರ್ಕಿಸುವ ಮೊದಲು ತನಗೆ ಸೂಚನೆ ನೀಡಿಲ್ಲ ಎಂದು ರಾಜ್ಯಪಾಲರು ದೂರಿದ್ದಾರೆ.
ಮಂತ್ರಿಗಳು ಕ್ರಿಸ್ಮಸ್ ಕೇಕ್ ಗಳೊಂದಿಗೆ ರಾಜಭವನಕ್ಕೆ ಆಗಮಿಸಿದ್ದರು. ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಸಮಾಲೋಚನಾ ಚಿಂತನೆತಯೂ ಈ ಭೇಟಿಯ ಹಿನ್ನೆಲೆಯಲ್ಲಿತ್ತು ಎನ್ನಲಾಗಿದೆ. ಒಂದು ತಿಂಗಳಿನಿಂದ ರೈತರ ಮುಷ್ಕರ ನಡೆಯುತ್ತಿದ್ದು, ಈ ಸಮಸ್ಯೆ ಕೇರಳದ ರೈತರ ಮೇಲೂ ಪರಿಣಾಮ ಬೀರುತ್ತಿದೆ ಎಂದು ಸಚಿವರು ಹೇಳಿದರು.