ತಿರುವನಂತಪುರ: ಕೆ-ಪೋನ್ ಯೋಜನೆಯ ಅನುಷ್ಠಾನಕ್ಕೆ ಪೂರ್ವಭಾವಿಯಾಗಿ ಇತರ ಕೇಬಲ್‍ಗಳನ್ನು ವಿದ್ಯುತ್ ಪೋಸ್ಟ್‍ಗಳಿಂದ ತೆಗೆದುಹಾಕುವಂತೆ ಕೆಎಸ್‍ಇಬಿ ನಿರ್ದೇಶನ ನೀಡಿದೆ. ಕಣ್ಣೂರು ವಿದ್ಯುತ್ ವಿಭಾಗದಲ್ಲಿ ಪೋಸ್ಟ್‍ಗಳಲ್ಲಿ ಅಳವಡಿಸಿರುವ ಇತರ ಕೇಬಲ್‍ಗಳನ್ನು ತೆಗೆದುಹಾಕುವಂತೆ ಕೆಎಸ್‍ಇಬಿ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ.
ಕೇಬಲ್ ಇಂಟರ್ನೆಟ್ ಸಂಪರ್ಕಕ್ಕಾಗಿ ಪ್ರತಿವರ್ಷ ಬಾಡಿಗೆಗೆ ನೀಡಲಾಗುವ ಕೇಬಲ್‍ಗಳನ್ನು ಗುರುವಾರ ಬದಲಾಯಿಸಬೇಕೆಂದು ಕೆಎಸ್‍ಇಬಿ ಒತ್ತಾಯಿಸಿದೆ. 20 ವರ್ಷಗಳಿಂದ ಹಾಕಲಾಗಿರುವ ಕೇಬಲ್‍ಗಳನ್ನು ತೆಗೆದುಹಾಕುವಂತೆ ಕೆಎಸ್‍ಇಬಿಯ ಕೋರಿಕೆಯೊಂದಿಗೆ ರಾಜ್ಯದಲ್ಲಿ ಕೇಬಲ್ ಮತ್ತು ಇಂಟರ್ನೆಟ್ ಕಾರ್ಯಾಚರಣೆಗಳು ತೀವ್ರ ಪ್ರತಿಕೂಲಗೊಳ್ಳಲಿದೆ ಎಂದು ತಿಳಿದುಬಂದಿದೆ.
ಕೇಬಲ್ ಟಿವಿ ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು ಕೇಬಲ್‍ಗಳನ್ನು ಬದಲಾಯಿಸದಿದ್ದರೆ, ಕೆಎಸ್‍ಇಬಿ ಅದನ್ನು ನೇರವಾಗಿ ತೆಗೆದುಹಾಕುತ್ತದೆ. ಇದರಿಂದ ಯಾವುದೇ ಹಾನಿಯಾಗದೆಂದು ತಿಳಿಸಿದೆ. ಇದೇ ವೇಳೆ ಕೇಬಲ್ ಗಳನ್ನು ಆರಂಭದಲ್ಲಿ ರಾಜ್ಯವ್ಯಾಪಿಯಾಗಿ ಏಕಕಾಲದಲ್ಲೇ ತೆಗೆದುಹಾಕಲಾಗುವುದಿಲ್ಲ ಎಂದು ಕೆ.ಎಸ್.ಇ.ಬಿ ಸ್ಪಷ್ಟಪಡಿಸಿದೆ. ಸರ್ಕಾರವು ಹೆಚ್ಚಿನ ಸಂಪರ್ಕಗಳನ್ನು ಪಡೆಯುವ ಸಾಧ್ಯತೆಯಿರುವ ನಗರ ಪ್ರದೇಶಗಳಲ್ಲಿ ಈ ಪ್ರಸ್ತಾಪವನ್ನು ಜಾರಿಗೆ ತರಲಾಗುತ್ತಿದೆ.
ಕೇಬಲ್ ತೆಗೆಯುವಂತೆ ರಾಜ್ಯದ ಎಲ್ಲಾ ವಿದ್ಯುತ್ ವಿಭಾಗಗಳ ಉಪ ಮುಖ್ಯ ಎಂಜಿನಿಯರ್‍ಗಳು ಕೇಬಲ್ ಆಪರೇಟರ್‍ಗಳು ಮತ್ತು ಬಿ.ಎಸ್.ಎನ್.ಎಲ್.ಗೆ ನಿರ್ದೇಶನ ನೀಡಿರುವರು. ಕೆಎಸ್‍ಇಬಿ ಹೊರಡಿಸಿದ ಪತ್ರದಲ್ಲಿ ಕೇಬಲ್‍ಗಳನ್ನು ಎಲ್ಲಿ ತೆಗೆಯಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಕೆಎಸ್‍ಇಬಿಯು ನಗರಗಳಲ್ಲಿ ಪ್ರತಿ ಕಂಬಕ್ಕೆ 500 ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕಂಬಕ್ಕೆ 200 ರೂ.ಬಾಡಿಗೆ ಪಡೆಯುತ್ತಿದೆ. ಕೇಬಲ್ ಆಪರೇಟರ್‍ಗಳಿಂದ ಈ ಮೌಲ್ಯ ವಸೂಲು ಮಾಡಲಾಗುತ್ತಿದೆ. ಕೆ-ಪೋನ್ ಕೇಬಲ್ ಮಾರ್ಗಗಳಲ್ಲಿ ಇತರ ಕೇಬಲ್ ಆಪರೇಟರ್‍ಗಳ ಅರ್ಜಿಗಳನ್ನು ಪರಿಗಣಿಸದಿರಲು ಕೆಎಸ್‍ಇಬಿ ನಿರ್ಧರಿಸಿದೆ.