ಪೆರ್ಲ:ಕೇರಳ ಕರ್ನಾಟಕ ಗಡಿ ಪಾಣಾಜೆ ದೈತೋಟ ಬಸ್ ನಿಲ್ದಾಣದ ಮುಂಭಾಗದಲ್ಲಿ ಪಾಣಾಜೆ ಗ್ರಾ.ಪಂ.ಅಳವಡಿಸಿದ್ದ ಸೋಲಾರ್ ಬೀದಿ ದೀಪ ಕಂಬ ಸಮೇತ ಅಕ್ಟೋಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದು ಈ ಪ್ರದೇಶದಿಂದ 200 ಮೀಟರ್ ದೂರದ ಸ್ವರ್ಗ ಅಂಗನವಾಡಿ ಮುಂಭಾಗದ ಖಾಸಗಿ ತೆಂಗಿನ ಹಿತ್ತಿಲಿನಲ್ಲಿ ಬೀದಿ ದೀಪದ ಕಂಬ ಪತ್ತೆಯಾಗಿದೆ.
ದೈತೋಟ ಸಮೀಪ ನಿರ್ಜನ ಪ್ರದೇಶ, ಪಾಣಾಜೆ ಬಸ್ ನಿಲ್ದಾಣ, ಪಂಚಾಯಿತಿ ಒಣಕಸ ಸಂಗ್ರಹಣಾ ಕೇಂದ್ರದ ತಾತ್ಕಾಲಿಕ ಶೆಡ್, ಹಾಲು ಉತ್ಪಾದಕರ ಸಹಕಾರಿ ಸಂಘದ ಹಾಲು ಸಂಗ್ರಹ ಕೇಂದ್ರದ ಎದುರು ಭಾಗದಲ್ಲಿ ಜನರ ಅನುಕೂಲಕ್ಕಾಗಿ ಪಾಣಾಜೆ ಗ್ರಾ.ಪಂ. ಅನುದಾನದಲ್ಲಿ ಅಳವಡಿಸಿದ ದಾರಿ ದೀಪವನ್ನು ಬುಡ ಸಮೇತ ಕಿತ್ತೊಯ್ಯಲಾಗಿತ್ತು. ಸೋಲಾರ್ ಪ್ಯಾನಲ್, ಬೀದಿ ದೀಪ ಉಪಕರಣಗಳನ್ನು ಕದ್ದೊಯ್ದ ಕಳ್ಳರು ದೀಪ ಅಳವಡಿಸಿದ ಕಂಬವನ್ನು ಖಾಸಗಿ ತೆಂಗಿನ ಹಿತ್ತಿಲಿನಲ್ಲಿ ಉಪೇಕ್ಷಿಸಿದ್ದು ಭಾನುವಾರ ಹಿತ್ತಿಲಿನ ಕಳೆ ನಾಶಗೊಳಿಸಿರುವ ಸಂದರ್ಭದಲ್ಲಿ ಕಂಬ ಪತ್ತೆಯಾಗಿದೆ.ಸ್ಥಳೀಯರು ಈ ಬಗ್ಗೆ ಸಂಪ್ಯ ಹೊರವಲಯ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.