ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ ಸಂಬಂಧ ಸಮಸ್ಯಾತ್ಮಕ ಮತಗಟ್ಟೆಗಳನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳುಜಂಟಿ ತಪಾಸಣೆ ನಡೆಸಲಿದ್ದಾರೆ.
ಕ್ರಿಟಿಕಲ್, ವಲ್ನರಬಲ್ ವಿಭಾಗಗಳಿಗೆ ಸೇರಿರುವ 127 ಸಮಸ್ಯಾತ್ಮಕ ಮತಗಟ್ಟೆಗಳನ್ನು ಜಿಲ್ಲಾಧಿಕಾರಿ, ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ, ಉಪಜಿಲ್ಲಾಧಿಕಾರಿ, ವಲಯಕಂದಾಯಧಿಕಾರಿ, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿಗಳಿರುವ ತಂಡ ತಪಾಸಣೆ ನಡೆಸಲಿದೆ. ಜಿಲ್ಲೆಯಲ್ಲಿ 84 ಕ್ರಿಟಿಕಲ್ ಬೂತ್ ಗಳಿವೆ. ಇವುಗಳಲ್ಲಿ 78 ಮತಗಟ್ಟೆಗಳು ಗ್ರಾಮ ಪಂಚಾಯತ್ ಗಳಲ್ಲಿ, 6 ಮತಗಟ್ಟೆಗಳು ನಗರಸಭೆಗಳಲ್ಲಿವೆ. 43 ವಲ್ನರಬಲ್ ಮತಗಟ್ಟೆಗಳಿವೆ. ತಪಾಸಣೆ ನಡೆಸಿದ ನಂತರ ಈ ಕಡೆಗಳಲ್ಲಿ ಸಿ.ಸಿ.ಟಿವಿ. ಕೆಮರಗಳನ್ನು ಅಳವಡಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು. ಡಿ.1,2 ರಂದು ಈ ತಪಾಸಣೆ ನಡೆಯಲಿದ್ದು, ಮಂಜೇಶ್ವರ ಬ್ಲಾಕ್ ಮಟ್ಟದಿಂದ ಆರಂಭಗೊಳ್ಳಲಿದೆ.