ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಪ್ರತಿ ದಿನ ಪ್ರತಿ ಕ್ಷಣ ಎಲ್ಲರಿಗೂ ಇದೀಗ ಲಭ್ಯವಾಗುತ್ತಿದೆ. 2019ರ ಡಿಸೆಂಬರ್ ಅವಧಿಯಲ್ಲಿ ಆಗಿನ್ನೂ ವೈರಸ್ ಸೋಂಕು ವ್ಯಾಪಕವಾಗಿ ಹರಡಿದ ಬಗ್ಗೆ ಯಾರಿಗೂ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಕಳೆದ ಒಂದು ವರ್ಷದಲ್ಲಿ ಮರೆಯಲಾಗದ ಅನುಭವ ನೀಡಿರುವ ಈ ಮಹಾಮಾರಿಯನ್ನು ಯಾವ ದೇಶವು ಸ್ವಾಗತಿಸಿಲ್ಲದಿದ್ದರೂ ವಿಶ್ವದ ಭೂಪಟದಲ್ಲಿ ಬಹುತೇಕ ಎಲ್ಲಾ ರಾಷ್ಟ್ರಗಳನ್ನು ಇಂದಿಗೂ ಕಾಡುತ್ತಿದೆ. ಆದರೆ, ಕೆಲವು ದೇಶಗಳಲ್ಲಿ ಕೊರೊನಾ ಸೋಂಕಿತ ಪ್ರಕರಣ ಸಂಖ್ಯೆ ''ಶೂನ್ಯ'' ಎಂದು ದಾಖಲಾಗಿದ್ದು, ಅಚ್ಚರಿಯಾದರೂ ಅಂಕಿ ಅಂಶ ಪ್ರಕಾರ ಇರಬಹುದು ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ವರ್ಲ್ಡ್ ಮೀಟರ್ ನೀಡಿರುವ ಅಂಕಿ ಅಂಶದಂತೆ ಡಿಸೆಂಬರ್ 7ರ ಈ ಸಮಯಕ್ಕೆ ವಿಶ್ವದೆಲ್ಲೆಡೆ ಒಟ್ಟು 6.7 ಕೋಟಿಗೂ ಅಧಿಕ ನೊವೆಲ್ ಕೊರೊನಾ ಸೋಂಕಿತ ಪ್ರಕರಣಗಳಿದ್ದು46,594,335 ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 48,136,286ಪ್ರಕರಣಗಳು ಮುಕ್ತಾಯಗೊಂಡಿವೆ. ಟಾಪ್ 10ರಲ್ಲಿರುವ ಎಲ್ಲಾ ದೇಶಗಳಲ್ಲಿ ಕನಿಷ್ಠ 10 ಲಕ್ಷ ಸೋಂಕಿತರಿದ್ದಾರೆ. ರಷ್ಯಾ ಸೋಂಕಿತರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
ಜಾಗತಿಕವಾಗಿ ಸಾವಿನ ಸಂಖ್ಯೆ 1,541,951ಕ್ಕೇರಿದೆ. ಒಟ್ಟು 19,083,225 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 106,224 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಆದರೆ, ಇದೆಲ್ಲದರ ನಡುವೆ ಕೊರೊನಾ ಸೋಂಕನ್ನು ಸೋಕಿಸಿಕೊಳ್ಳದ ರಾಷ್ಟ್ರಗಳ ಪಟ್ಟಿ ಇಲ್ಲಿದೆ;
* ಉತ್ತರ ಕೊರಿಯಾ
* ತುರ್ಕ್ಮೇನಿಸ್ತಾನ
* ಸಮೋವಾ
* ಕಿರಿಬಾಟಿ
* ಫೆಡೆರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೊನೇಷಿಯಾ
* ಟೊಂಗಾ
* ಟುವುಲು
* ಪಲಾವು (Palau)
* ಮಾರ್ಷಲ್ ದ್ವೀಪಗಳು
* ಸೊಲೊಮನ್ ದ್ವೀಪಗಳು
* ವಾನುವಾಟು(Vanuatu)
* ನೌರು.