HEALTH TIPS

WhatsApp Tips: ನಿಮ್ಮ ಫೋನಲ್ಲಿರುವ ಪ್ರತಿಯೊಬ್ಬರ ಚಾಟ್‌ಗಳಿಗಾಗಿ ಕಸ್ಟಮ್ ವಾಟ್ಸಾಪ್ ವಾಲ್‌ಪೇಪರ್ ಹೊಂದಿಸುವುದು ಹೇಗೆ?

        ಇತ್ತೀಚೆಗೆ ವಾಟ್ಸಾಪ್ ಬಳಕೆದಾರರು ಗುಂಪುಗಳು ಮತ್ತು ವ್ಯಕ್ತಿಗಳು ಸೇರಿದಂತೆ ಎಲ್ಲಾ ಚಾಟ್ಗಳಿಗೆ ಕೇವಲ ಒಂದು ವಾಲ್ಪೇಪರ್ ಅನ್ನು ಹೊಂದಿಸಬಹುದು. ಈ ವಾರದ ಆರಂಭದಲ್ಲಿ ಫೇಸ್ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿತು ಇದು ಬಳಕೆದಾರರಿಗೆ ವಿಶೇಷ ಸಂಪರ್ಕಕ್ಕಾಗಿ ಕಸ್ಟಮ್ ವಾಟ್ಸಾಪ್ ವಾಲ್ಪೇಪರ್ ಅನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ. ವೈಯಕ್ತಿಕ ವಾಟ್ಸಾಪ್ ಚಾಟ್ಗಾಗಿ ನೀವು ವಿಶೇಷ ವಾಲ್ಪೇಪರ್ ಅನ್ನು ಹೇಗೆ ಹೊಂದಿಸಬಹುದು ಎಂಬುದನ್ನು ನೋಡಿ.

        ಇದನ್ನು ಮಾಡುವುದು ತುಂಬ ಸರಳ. ನೀವು ಹೊಸ ವಾಲ್ಪೇಪರ್ ಅನ್ನು ಹೇಗೆ ಹೊಂದಿಸುತ್ತೀರಿ ಎಂಬುದರಂತೆಯೇ ಇದು ಕಾರ್ಯನಿರ್ವಹಿಸುತ್ತದೆ ಆದರೆ ಅದಕ್ಕೂ ಮೊದಲು ನಿಮ್ಮ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಇತ್ತೀಚಿನ ಆವೃತ್ತಿಗೆ ನವೀಕರಿಸಲು ಖಚಿತಪಡಿಸಿಕೊಳ್ಳಿ. ಹೊಸ ವಾಲ್ಪೇಪರ್ ವೈಶಿಷ್ಟ್ಯವು ಎಲ್ಲಾ ವಾಟ್ಸಾಪ್ ಬಳಕೆದಾರರಿಗೆ ಲಭ್ಯವಿರುತ್ತದೆ. ಐಫೆÇೀನ್ ಬಳಕೆದಾರರು ಈಗಾಗಲೇ ಇತ್ತೀಚಿನ ವಾಟ್ಸಾಪ್ ಅಪ್ಡೇಟ್ನೊಂದಿಗೆ ಈ ವೈಶಿಷ್ಟ್ಯವನ್ನು ಸ್ವೀಕರಿಸಿದ್ದಾರೆ.


       ಹಂತ 1: ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಅಲ್ಲಿ ಹೋಗಿ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಅಪ್ಡೇಟ್ ಮಾಡಿಕೊಳ್ಳಿ.

ಹಂತ 2: ನಂತರ ವಾಟ್ಸಾಪ್ ಅಪ್ಲಿಕೇಶನ್ ತೆರೆದು ವಿಶೇಷ ವಾಲ್ಪೇಪರ್ ಹೊಂದಿಸಲು ಬಯಸುವವರ ನಂಬರ್ ಮೇಲೆ ಕ್ಲಿಕ್ ಮಾಡಿ

ಹಂತ 3: ನಂತರ ಕಾಂಟೆಕ್ಟ್ ಖಾತೆ ವಿವರಗಳ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ವಾಲ್ಪೇಪರ್ ಮತ್ತು ವಾಯ್ಸ್ ಆಯ್ಕೆಗೆ ಕ್ಲಿಕ್ ಮಾಡಿ.

ಹಂತ 4: ಅದು ನಂತರ ಸಂಪರ್ಕಕ್ಕಾಗಿ ಇತ್ತೀಚಿನ ವಾಲ್ಪೇಪರ್ ಅನ್ನು ತೋರಿಸುತ್ತದೆ. ಆ ವೈಯಕ್ತಿಕ ಚಾಟ್ಗಾಗಿ ವಾಲ್ಪೇಪರ್ ಬದಲಾಯಿಸಲು ‘Choose a New Wallpaper’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 5: ವಾಟ್ಸಾಪ್ ಬ್ರೈಟ್, ಡಾರ್ಕ್ ಮತ್ತು ಸಾಲಿಡ್ ಕಲರ್ಸ್ ಸೇರಿದಂತೆ ಮೂರು ರೀತಿಯ ವಾಲ್ಪೇಪರ್ಗಳನ್ನು ತೋರಿಸುತ್ತದೆ. ನಿಮಗೆ ಸೂಕ್ತವಾದ ಯಾವುದನ್ನಾದರೂ ನೀವು ಆಯ್ಕೆ ಮಾಡಿಕೊಳ್ಳಿ.

ಹಂತ 6: ಇದರ ಗಮನಾರ್ಹವಾಗಿ ನಿಮ್ಮ ಗ್ಯಾಲರಿಯ ಫೋಟೋವನ್ನು ಸಹ ವಾಲ್ಪೇಪರ್ನಂತೆ ಹಾಕಲು ವಾಟ್ಸಾಪ್ ನಿಮಗೆ ಅವಕಾಶ ನೀಡುತ್ತದೆ. ಹಾಗೆ ಮಾಡಲು ಒಂದೇ ಸ್ಕ್ರೀನ್ ಅಲ್ಲಿನ ಫೋಟೋಗಳ ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 7: ನಂತರ ನೀವು ಬಳಸಬೇಕಾದ ವಾಲ್ಪೇಪರ್ ಅನ್ನು ಆಯ್ಕೆ ಮಾಡಿ SET ಮೇಲೆ ಕ್ಲಿಕ್ ಮಾಡಿ.

ಹಂತ 8: ಕೊನೆಯಲ್ಲಿ ಈ ವಾಲ್ಪೇಪರ್ ಎಷ್ಟು ಲೈಟ್ ಅಥವಾ ಡಾರ್ಕ್ ಆಗಿ ಹೊಂದಿಸಬೇಕೆಂದು ನಿರ್ಧರಿಸಿ ಸೆಟ್ ಮಾಡಿ ಅಷ್ಟೇ.

ಹಂತ 9: ಅಲ್ಲದೆ ಇದು ನಿಮಗೆ ಬೇಕಾದಾಗ ಈ ಕಸ್ಟಮ್ ವಾಲ್ಪೇಪರ್ ಅನ್ನು ತೆಗೆದುಹಾಕುವ ಮಾರ್ಗವೂ ಇದೆ ‘Remove Custom Wallpaper’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries