ವಾಷಿಂಗ್ಟನ್ : ವಿಶ್ವ ಅರೋಗ್ಯ ಸಂಸ್ಥೆ ನಿಲುವು ಸ್ಪಷ್ಟವಾಗಿದೆ. ಕೊರೊನಾ ಸೋಂಕಿನ ಹುಟ್ಟನ್ನು ಕಂಡುಹಿಡಿಯುವ ಅಗತ್ಯವಿದೆ ಎಂದು ವಿಶ್ವಸಂಸ್ಥೆ ನಿರ್ದೇಶಕ ಟೆಡ್ರೋಸ್ ಹೇಳಿದ್ದಾರೆ.
ಮುಂದಾಗುವ ಅನಾಹುತವನ್ನು ತಪ್ಪಿಸಲು ಕೊರೊನಾ ಸೋಂಕಿನ ಹುಟ್ಟು ಕಂಡುಹಿಡಿಯುವುದು ಅತಿಮುಖ್ಯವಾಗಿದೆ. ಹೀಗಾಗಿ ಕೊರೊನಾ ಸೋಂಕಿನ ಹುಟ್ಟನ್ನು ಕಂಡು ಹಿಡಿದೇ ಹಿಡಿಯುತ್ತೇವೆ ಎಂದು ಭರವಸೆ ನೀಡಿದರು.
ನಾವು ಮೂಲವನ್ನು ತಿಳಿದಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಆದರೆ ಕೆಲವರು ಇದನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ.
ನಾವು ವುಹಾನ್‌ನಿಂದ ಅಧ್ಯಯನವನ್ನು ಪ್ರಾರಂಭಿಸುತ್ತೇವೆ. ಅಲ್ಲಿ ಏನಾಗಿದೆ ಎಂದು ತಿಳಿದು ಸಂಶೋಧನೆ ಆಧಾರದ ಮೇಲೆ ಇತರೆ ಮಾರ್ಗಗಳಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ ನಮ್ಮ ನಿಲುವು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಅಮೆರಿಕದ ವಿಜ್ಞಾನಿಗಳು ಕೊರೊನಾ ಸೋಂಕು ಭಾರತದಲ್ಲಿ ಹುಟ್ಟಿದ್ದು ಅದು ಕಲುಷಿತ ನೀರಿನಿಂದ ಬಂದಿದ್ದು, ಪ್ರಾಣಿಯಿಂದ ಮನುಷ್ಯನಿಗೆ ಬಂದಿತ್ತು.
ಬಳಿಕ ಭಾರತದವರು ಚೀನಾಗೆ ಬಂದಿದ್ದು, ಚೀನಾದಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಸಾಕಷ್ಟು ಆಕ್ರೋಶವೂ ವ್ಯಕ್ತವಾಗಿತ್ತು. ಕೊರೊನಾ ಸೋಂಕಿನ ಹುಟ್ಟು ಯಾವುದೆಂದು ನಮಗೆ ಗೊತ್ತಿದೆ ನೀವು ಹೇಳುವ ಮೂಲಕ ಸುಳ್ಳು ಸತ್ಯವಾಗುವುದಿಲ್ಲ ಎಂದು ಭಾರತದ ವಿಜ್ಞಾನಿಗಳು ಕೂಡ ಹೇಳಿದ್ದರು.