HEALTH TIPS

ಕೆ.ಎಸ್.ಆರ್.ಟಿ.ಸಿ.ಯ 100 ಕೋಟಿ ರೂ.ಗಳ ಆರ್ಥಿಕ ಭ್ರಷ್ಟಾಚಾರ ತನಿಖೆ ಮೂಲೆಗುಂಪು!-ವಿಜಿಲೆನ್ಸ್ ತನಿಖೆಗೆ ಕ್ರಮವಿಲ್ಲ

                            

      ತಿರುವನಂತಪುರ: ಕೆ.ಎಸ್.ಆರ್.ಟಿ.ಸಿ.ಯಲ್ಲಿ 100 ಕೋಟಿ ರೂ.ಗಳ ಆರ್ಥಿಕ ಅಕ್ರಮಗಳ ಬಗ್ಗೆ ತನಿಖೆಯ ದಾರಿ ತಪ್ಪಿಸುವ ಯತ್ನ ನಡೆಯುತ್ತಿದೆ ಎಂಬ ಸಂಶಯಗಳು ಹುಟ್ಟಿಕೊಂಡಿದೆ. ಎಂಡಿ ಬಿಜು ಪ್ರಭಾಕರ್ ಅವರು ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದ ಎರಡು ವಾರಗಳ ಬಳಿಕವೂ ವಿಜಿಲೆನ್ಸ್ ತನಿಖೆಗೆ ಶಿಫಾರಸು ಮಾಡದಿರುವುದರ ಹಿಂದೆ ಸಂಚಿದೆ ಎನ್ನಲಾಗಿದೆ. ಕಾರ್ಯನಿರ್ವಾಹಕ ನಿರ್ದೇಶಕರಿಂದ ವಿವರಣೆ ಪಡೆಯುವುದನ್ನು ಬಿಟ್ಟು ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ.

      ಕೆಎಸ್‍ಆರ್‍ಟಿಸಿ ಎಂಡಿ ಬಿಜು ಪ್ರಭಾಕರ್ ಅವರು ಜನವರಿ 16 ರಂದು ತಿರುವನಂತಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಅಕ್ರಮಗಳ ವಿಷಯವನ್ನು ಎತ್ತಿದ್ದರು. 2010-13ರ ಅವಧಿಯಲ್ಲಿ ಕೆ.ಟಿ.ಡಿ.ಎಫ್.ಸಿಯೊಂದಿಗಿನ ಹಣಕಾಸಿನ ವ್ಯವಹಾರದಿಂದ 100 ಕೋಟಿ ರೂ. ನಾಪತ್ತೆಯಾಗಿರುವುದು ಮತ್ತು ಕೆ.ಎಸ್.ಆರ್.ಟಿ.ಸಿ.ಗೆ ಸಂಬಂಧಿಸಿದ ಫೈಲ್‍ಗಳು ಕಾಣೆಯಾಗಿರುವ ಬಗ್ಗೆ ಎಂಡಿ ಆರೋಪಿಸಿದ್ದರು.

          ಹಣಕಾಸು ಲೆಕ್ಕಪರಿಶೋಧನಾ ವಿಭಾಗದ ವರದಿಯಿಂದ ಇದನ್ನು ಈಗಾಗಲೇ ದೃಢಪಡಿಸಲಾಗಿದೆ. ತರುವಾಯ, ಆರೋಪದ ಸಮಯದಲ್ಲಿ ಹಾಲಿ ಮಾಜಿ ನಿರ್ದೇಶಕ ಮತ್ತು ಖಾತೆಗಳ ಉಸ್ತುವಾರಿ ಅಧಿಕಾರಿ ಕೆ.ಎಂ.ಶ್ರೀಕುಮಾರ್ ಅವರನ್ನು ಎರ್ನಾಕುಳಂಗೆ ವರ್ಗಾಯಿಸಲಾಯಿತು. ಅವರಿಂದ ವಿವರಣೆ ಕೋರಿದ ನಂತರ ವಿಜಿಲೆನ್ಸ್ ತನಿಖೆಗೆ ಶಿಫಾರಸು ಮಾಡುವುದಾಗಿ ಎಂಡಿ ಹೇಳಿದ್ದರು.ಆದರೆ ಎರಡು ವಾರ ಕಳೆದಿದ್ದರೂ ಇನ್ನೂ ವಿಜಿಲೆನ್ಸ್ ತನಿಖೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ಉನ್ನತಮಟ್ಟದಲ್ಲಿ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಯತ್ನ ನಡೆಯುತ್ತಿದೆಯೇ ಎಂಬ ಸಂಶಯಕ್ಕೆ ಕಾರಣವಾಗಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries