ದೇಶಭಕ್ತಿಯು ಕಾಲೋಚಿತ ಅಥವಾ ವಯಸ್ಸಿನ ಮೇಲೆ ಅವಲಂಬಿತವಾಗಿರುವ ವಿಷಯವಲ್ಲ. ನಮ್ಮ ಮಕ್ಕಳು ಸ್ವತಂತ್ರ ನಾಗರಿಕರಾಗಿ ಬೆಳೆಯಲು, ನಮ್ಮ ದೇಶವನ್ನು ಸ್ವತಂತ್ರಗೊಳಿಸುವುದಕ್ಕಾಗಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಪಟ್ಟಿರುವ ಶ್ರಮ, ತ್ಯಾಗ ಹಾಗು ಕಷ್ಟಗಳ ಜ್ಞಾನವನ್ನು ನಾವು ಅವರಿಗೆ ತಿಳಿಸಿಕೊಡಬೇಕು. ಅವರು ಸ್ವಾತಂತ್ರ್ಯ ಚಳುವಳಿ ಮತ್ತು ಹೋರಾಟದ ಬಗ್ಗೆ ಆವಶ್ಯಕವಾಗಿ ತಿಳಿದುಕೊಳ್ಳಬೇಕಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಯೋಧರು ಮತ್ತು ಮುಖಂಡರು ಭಾರತವನ್ನು ಬಹಳಷ್ಟು ಪ್ರಯತ್ನ ಹಾಗು ಹೋರಾಟಗಳನ್ನು ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ನಿಮ್ಮ ಮಕ್ಕಳು ಇದರ ಬಗ್ಗೆ ತಿಳಿದುಕೊಳ್ಳಲು ತುಂಬಾ ಚಿಕ್ಕವರು ಎಂದು ಭಾವಿಸಬೇಡಿ. ಇದನ್ನು ನಮ್ಮ ಮಕ್ಕಳಿಗೆ ಗಣರಾಜ್ಯೋತ್ಸವ ಸಂಧರ್ಭದಲ್ಲಿ ತಿಳಿಸುವ ಪ್ರಯತ್ನ ಮಾಡೋಣ.
1. ಗಣರಾಜ್ಯ/ ತಂತ್ರ ಎಂದರೇನು ?
ಗಣರಾಜ್ಯ/ ರಿ ಪಬ್ಲಿಕ್ ಎಂದರೆ ಎಲ್ಲಾ ವಿಷಯಗಳು ಸಾರ್ವಜನಿಕವಾಗಿರುವುದು (ಪಾರದರ್ಶಕವಾಗಿರುವುದು ). ಅಂದರೆ ಒಂದು ಗಣರಾಜ್ಯ ದೇಶದಲ್ಲಿ ಸರ್ಕಾರ ಜನರಿಂದ ರಚನೆಯಾಗಿರುತ್ತದೆ, ಜನರ ಎಲ್ಲಾ ವಿಷಯಗಳನ್ನು ಪರಿಗಣಿಸುವುದರ ಮೂಲಕ ಕಾಳಜಿ ವಹಿಸಲಾಗುತ್ತದೆ. ಗಣರಾಜ್ಯ ರಾಷ್ಟ್ರವನ್ನು ರಾಜನು ಆಳುವುದಿಲ್ಲ.ಆಡಳಿತ ರಾಜನ ಆಳ್ವಿಕೆಗಿಂತ ಉತ್ತಮವಾಗಿರುತ್ತದೆ.
2. ಗಣರಾಜ್ಯೋತ್ಸವ ದಿನ ಏನನ್ನು ಸೂಚಿಸುತ್ತದೆ?
ಗಣರಾಜ್ಯೋತ್ಸವ ದಿನದಂದು ಭಾರತ ಸಂವಿಧಾನದ ರಚನೆಯಾಯಿತು ಮತ್ತು ಗಣರಾಜ್ಯವಾದ ಭಾರತವನ್ನು ರಿಪಬ್ಲಿಕ್ ಕಂಟ್ರಿ ಎಂದು ಘೋಷಿಸಲಾಯಿತು.
3. ದಿನಾಂಕ
ಭಾರತವು ಗಣರಾಜ್ಯವಾದದ್ದು ಜನವರಿ 26, 1950 ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ.
1930 ರಲ್ಲಿ ಭಾರತ ಸರ್ಕಾರದ ಕಾಯಿದೆ ಬದಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ರಚಿಸಲಾದ ಭಾರತದ ಆಡಳಿತ ಕಾಯಿದೆಯ ದಾಖಲೆಯ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು.
1950 ರಲ್ಲಿ ಪೂರ್ಣಸ್ವಾರಾಜ್ ಎಂದು ಘೋಷಿಸಲಾಯಿತು ಹೀಗಾಗಿ 26 ನೇ ಜನವರಿ ರಾಷ್ಟ್ರೀಯ ರಜಾದಿನವಾಗಿ ಘೋಷಿಸಲಾಗಿದೆ.
4. ಸಂವಿಧಾನ ಎಂದರೇನು?
ಸಂವಿಧಾನವೆಂದರೆ ಭಾರತದ ಎಲ್ಲಾ ನಾಗರಿಕರು ಅನುಸರಿಸಬೇಕಾದ ಮೂಲಭೂತ ನಿಯಮ ಮತ್ತು ಹಕ್ಕುಗಳ ಸ್ಥಾಪನೆಗೆ ರಚಿಸಲಾಗಿರುವ ಕಾಯಿದೆ. ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಇಲ್ಲಿ ಕಾನೂನು ಎಲ್ಲರಿಗೂ ಸಮಾನವಾಗಿರುವುದು.
5. ಸಂವಿಧಾನವನ್ನು ರಚಿಸಿದವರು ಯಾರು?
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದವರು.
ಭಾರತೀಯ ಸಂವಿಧಾನವು ವಿಶ್ವದ ಅತಿ ಉದ್ದವಾದ ಸಂವಿಧಾನವಾಗಿದ್ದು, ಇದರಲ್ಲಿ 22 ಭಾಗಗಳಲ್ಲಿ, 12 ವಿವರ ಪಟ್ಟಿ ಮತ್ತು 97 ತಿದ್ದುಪಡಿಗಳಾಗಿ ವಿಂಗಡಿಸಲಾಗಿರುವ 448 ಲೇಖನಗಳನ್ನು ಒಳಗೊಂಡಿದೆ.
ಸಂಸತ್ತಿನ ಗ್ರಂಥಾಲಯದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕೈ ಬರಹದಲ್ಲಿರುವ ಕ್ಯಾಲಿಗ್ರಫೆಡ್ ಪ್ರತಿಗಳನ್ನು ಸಂರಕ್ಷಿಸಲಾಗಿದೆ.
ಅವುಗಳನ್ನು ಹೀಲಿಯಂ ತುಂಬಿರುವ ಪೆಟ್ಟಿಗೆಯಲ್ಲಿ ಇರಿಸಲಾಗಿದೆ.
ಭಾರತದಲ್ಲಿ ಯಾವುದೇ ರಾಜರ ಆಳ್ವಿಕೆ ಇಲ್ಲ. ಜನರಿಗೆ ಚುನಾವಣೆಯಿಂದ ಅವರ ನಾಯಕರನ್ನು ಆಯ್ಕೆ ಮಾಡುವ ಹಕ್ಕಿದೆ.
6. ಭಾರತದ ವಿವಿಧ ಸಂಸ್ಕøತಿಯ ಪ್ರದರ್ಶನ
ಗಣರಾಜ್ಯೋತ್ಸವದಿನದಂದು ದೆಹಲಿಯ ರಾಜ್ ಪಥ್ ನಲ್ಲಿ ಜಗತ್ಪ್ರಸಿದ್ಧ ರಾಷ್ಟ್ರೀಯ ಪರೇಡ್ ನಡೆಯುತ್ತದೆ.
ಸೈನ್ಯ, ವಾಯುಪಡೆ ಮತ್ತು ನೌಕಾಪಡೆ ನಮ್ಮ ಭಾರತ ದೇಶದ ಸಾಮಥ್ರ್ಯವನ್ನು ತೋರಿಸುತ್ತಾರೆ.
ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸಲಾಗುವುದು. ಪ್ರಪಂಚಕ್ಕೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಎಲ್ಲಾ ರಾಜ್ಯಗಳ ಟ್ಯಾಬ್ಲಾಯ್ಡ್ಗಳ ಮೂಲಕ ತೋರಿಸಲಾಗುವುದು.
7. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ ದಿನಾಚರಣೆಯಲ್ಲಿರುವ ವ್ಯತ್ಯಾಸವೇನು?
ಗಣರಾಜ್ಯೋತ್ಸವವನ್ನು ಪ್ರತಿವರ್ಷವೂ ಜನವರಿ 26 ರಂದು ಪ್ರಜಾಪ್ರಭುತ್ವದ ರಾಷ್ಟ್ರವನ್ನು ಪ್ರಾರಂಭಿಸಿದ ದಿನವೆಂದು ಆಚರಿಸಲಾಗುತ್ತದೆ.
ಪ್ರತಿವರ್ಷ ಆಗಸ್ಟ್ 15 ರಂದು ಭಾರತ ಬ್ರಿಟಿಷರ ಆಡಳಿತದಿಂದ ಸ್ವಾತಂತ್ರ್ಯವನ್ನು ಪಡೆದ ದಿನವನ್ನು ಸ್ವಾತಂತ್ರ್ಯ ದಿನವೆಂದು ಆಚರಿಸುತ್ತೇವೆ.
8. ಆಚರಣೆಗಳು
ದೆಹಲಿಯ ರಾಜ್ಪಥ್ ನಲ್ಲಿ ನಮ್ಮ ಸಶಸ್ತ್ರ ಪಡೆಗಳಾದ ಆರ್ಮಿ, ಏರ್ ಫೆÇೀರ್ಸ್ ಮತ್ತು ನೌಕಾಪಡೆ ಪರೇಡ್ ನೋಡಲು ಆಕರ್ಷಕವಾಗಿರುತ್ತದೆ.
ಇತರ ದೇಶಗಳಿಂದ ಆಹ್ವಾನಿತರಾದ ಅತಿಥಿಗಳಿಗೆ ಗೌರವ ಸಲ್ಲಿಸಲಾಗುವುದು.
ಭಾರತದ ಅಧ್ಯಕ್ಷರು ಸರ್ಕಾರ ಆಯೋಜಿಸಿದ ಗಣರಾಜ್ಯೋತ್ಸವಕ್ಕೆ ವಂದಿಸುವರು.
9. ಗಣರಾಜ್ಯೋತ್ಸವದಂದು ನೀಡಲಾಗುವ ಪ್ರಶಸ್ತಿಗಳು
ಗಣರಾಜ್ಯೋತ್ಸವದಂದು ದೇಶದ ಹುತಾತ್ಮರು ಮತ್ತು ಕೆಚ್ಚೆದೆಯ ನಾಗರಿಕರಿಗೆ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.
ಮಕ್ಕಳಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿಯನ್ನು ನೀಡಲಾಗುವುದು.
ಮೊದಲನೆಯ ಅತ್ಯುನ್ನತ ಕ್ರಮದಲ್ಲಿ ನಾಗರಿಕರಿಗೆ ಭಾರತ ರತ್ನವನ್ನು ಅಸಾಧಾರಣ ಸೇವೆ ಅಥವಾ ಪ್ರದರ್ಶನಕ್ಕಾಗಿ ನೀಡಲಾಗುತ್ತದೆ
ಎರಡನೆಯ ಅತ್ಯುನ್ನತ ಕ್ರಮದಲ್ಲಿ ಪದ್ಮ ವಿಭೂಷಣವನ್ನು ಅಸಾಧಾರಣ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.
ಮೂರನೇ ಉನ್ನತ ಕ್ರಮಾಂಕದ ಪದ್ಮಭೂಷಣವನ್ನು ವಿಶೇಷ ಸೇವೆಗಾಗಿ ನಾಗರಿಕರಿಗೆ ನೀಡಲಾಗುತ್ತದೆ.
ನಾಲ್ಕನೇ ಕ್ರಮಾಂಕದ ಪದ್ಮಶ್ರೀ ಪ್ರಶಸ್ತಿ ಪ್ರಜೆಗಳಿಗೆ ವಿಶೇಷ ಸೇವೆಗಾಗಿ ನೀಡಲಾಗುತ್ತದೆ.
ಅಶೋಕ್ ಚಕ್ರ ಮತ್ತು ಕೀರ್ತಿ ಚಕ್ರ ಪ್ರಶಸ್ತಿ ಯನ್ನು ಯುದ್ಧ ಅಥವಾ ವಿಪತ್ತಿನಲ್ಲಿ ರಾಷ್ಟ್ರಕ್ಕೆ ಸೇವೆ ಹಾಗು ಗೌರವ ಸಲ್ಲಿಸಿರುವ ಹುತಾತ್ಮರ ಕುಟುಂಬಗಳಿಗೆ ನೀಡಲಾಗುತ್ತದೆ.
10. ಗಣರಾಜ್ಯೋತ್ಸವವನ್ನು ಮಕ್ಕಳೊಂದಿಗೆ ಆಚರಿಸಲು ಉಪಯುಕ್ತ ಸಲಹೆಗಳು :
ಮಕ್ಕಳನ್ನು ಬೆಳಗ್ಗೆ ಬೇಗ ಎಚ್ಚರಗೊಳಿಸಿ ಮಕ್ಕಳ ಜೊತೆ ದೂರದರ್ಶನದಲ್ಲಿ ಪ್ರಸಾರವಾಗುವ ಲೈವ್ ಗಣರಾಜ್ಯೋತ್ಸವ ಪೆರೇಡ್ ನ ವೀಕ್ಷಿಸಬಹುದು.
ಶಾಲೆಗೆ ರಜಾ ಘೋಷಿಸಿದ್ದರೆ, ಧ್ವಜಾರೋಹಣ ನಡೆಯುತ್ತಿರುವ ಸ್ಥಳಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬಹುದು.
ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕಥೆಗಳನ್ನು ಹೇಳಬಹುದು.
ಸ್ವಾತಂತ್ರ್ಯ ಹೋರಾಟಗಾರರಂತೆ ವಸ್ತ್ರಗಳನ್ನು ಧರಿಸಿ ಅವರ ಬಗ್ಗೆ ತಿಳಿಸಿ ಹೇಳಬಹುದು.
ಪುಟ್ಟ ವಯಸ್ಸಿನಲ್ಲಿ ದೇಶಭಕ್ತಿಯ ಅರಿವು ಮೂಡಿಸಲು ಹುತಾತ್ಮರಿಗೆ ವಂದನೆ ಸಲ್ಲಿಸಬಹುದು.
ಮೊದಲನೆಯದಾಗಿ ಮತ್ತು ಕೊನೆಯದಾಗಿ ನಾವು ಭಾರತೀಯರು -ಡಾ.ಬಿ.ಆರ್. ಅಂಬೇಡ್ಕರ್