HEALTH TIPS

ರಾಜ್ಯದಲ್ಲಿ ಕೋವಿಡ್ ವ್ಯಾಪಕತೆ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಕ್ಕೆ-ರಾತ್ರಿ 10 ರ ಬಳಿಕ ಸಂಚಾರ ಕಡಿತಗೊಳಿಸಲು ಸೂಚನೆ-ಪೋಲೀಸರಿಗೆ ಪವರ್!

   

       ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ವ್ಯಾಪಕತೆ ತೀವ್ರವಾಗಿದ್ದು ಜಾಗರೂಕತೆಗಳುಸಮರೋಪಾದಿಯಲ್ಲಿರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರೋಗಿಗಗಳ ಸಂಖ್ಯೆ ಏಕಾಏಕಿ ಹೆಚ್ಚುಚ್ಚಿದ್ದು ಕಳವಳಕಾಇಯಾಗಿದೆ. ಅನ್ಚಯ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್ ಮರಣ ಪ್ರಮಾಣ ಕಡಿಮೆ ಇದೆ. ಕೇರಳದ ಪರಿಸ್ಥಿತಿ ಕಳವಳಕಾರಿಯಾದರೂ ಇಲ್ಲಿಯವರೆಗೆ ಜನಸಂಖ್ಯೆಯ ಮೂರು ಪ್ರತಿಶತಕ್ಕಿಂತ ಕಡಿಮೆ ಜನರು ಸೋಂಕಿಗೆ ಒಳಗಾಗಿದ್ದಾರೆ. ಟೀಕೆಗಳ ಹೊರತಾಗಿಯೂ, ಯಾವುದೇ ಗೊಂದಲಗಳಿಲ್ಲ.  ನಿಜವಾದ ಅಂಕಿಅಂಶಗಳನ್ನು ಜನರ ಮುಂದೆ ಇಡಲಾಗುತ್ತಿದೆ ಎಂದರು. 

      ಕೋವಿಡ್ ರಕ್ಷಣಾ ಚಟುವಟಿಕೆಗಳನ್ನು ರಾಜಿ ಮಾಡಿಕೊಳ್ಳದೆ ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರ್ದೇಶನ ನೀಡಿದರು. ಬಸ್ ನಿಲ್ದಾಣ. ಶಾಪಿಂಗ್ ಮಾಲ್‍ಗಳು ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಪೋಲೀಸರು ತಪಾಸಣೆ ನಡೆಸಲಿದ್ದಾರೆ. ಮಾಸ್ಕ್ ಮತ್ತು ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲಾಗುವುದು. ನಾಳೆಯಿಂದ ಫೆಬ್ರವರಿ 10 ರವರೆಗೆ 25000 ಪೋಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದರು.

       ಮುಚ್ಚಿದ ಸಭಾಂಗಣಗಳಲ್ಲಿನ ಜನಸಂದಣಿಯನ್ನು ನಿಯಂತ್ರಿಸಬೇಕು. ವಾರ್ಡ್ ಮಟ್ಟದ ಸಮಿತಿಗಳನ್ನು ಪುನಶ್ಚೇತನಗೊಳಿಸಲಾಗುವುದು. ಅವನ್ನು ವಾರ್ಡ್ ಸದಸ್ಯರು ಮುನ್ನಡೆಸಲಿದ್ದಾರೆ. ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಶಾಪಿಂಗ್ ಮಾಲ್‍ಗಳಲ್ಲಿ ಕೋವಿಡ್ ತಡೆಗಟ್ಟುವ ಮಾನದಂಡಗಳಿಗೆ ಬದ್ಧನಾಗಿರುವುದನ್ನು ಪೋಲೀಸರು ಖಚಿತಪಡಿಸುತ್ತಾರೆ.

          ಸ್ಥಳೀಯ ಚುನಾವಣೆಗೆ ಮುನ್ನ ಕೋವಿಡ್ ಹರಡುವುದನ್ನು ನಿಯಂತ್ರಿಸಲು ವಾರ್ಡ್ ಮಟ್ಟದ ಸಮಿತಿಗಳಿದ್ದವು. ಅದು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಸಂತ್ರಸ್ತರು ಮತ್ತು ಅವರ ಸಂಬಂಧಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ವಾರ್ಡ್ ಮುಖ್ಯ ಸಮಿತಿಯು ಕೋವಿಡ್ ಹರಡುವುದನ್ನು ತಡೆಯುವಲ್ಲಿ ಮುಂದಾಳತ್ವ ವಹಿಸಿತ್ತು. ಆದರೆ ಸ್ಥಳೀಯ ಚುನಾವಣೆಗಳ ನಂತರ, ವಾರ್ಡ್ ಮಟ್ಟದ ಸಮಿತಿ ನಿಷ್ಕ್ರಿಯವಾಯಿತು. ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಚುನಾವಣೆಯ ನಂತರ ಹೊಸ ಆಡಳಿತ ಮಂಡಳಿ ರಚನೆಯಾಗಿದ್ದು ವಾರ್ಡ್ ಮಟ್ಟದ ಸಮಿತಿಗಳನ್ನು ಪುನರುಜ್ಜೀವನಗೊಳಿಸಲಾಗುತ್ತದೆ.

           ವಲಯದ ಮ್ಯಾಜಿಸ್ಟ್ರೇಟ್‍ಗಳನ್ನು ಮತ್ತಷ್ಟು ನಿಯೋಜಿಸಲಾಗುವುದು. ಅವರು ಪೋಲೀಸರೊಂದಿಗೆ ಕಾರ್ಯನಿರ್ವಹಿಸಬೇಕು. ಮದುವೆ ಸಮಾರಂಭ ನಡೆಸುವಾಗಲೂ ಕಾಳಜಿ ವಹಿಸಬೇಕು. ಸಭಾಂಗಣದಲ್ಲಿ ಪ್ರದರ್ಶನ ನೀಡುವಾಗ ಮಾಲೀಕರು ಜನಸಂದಣಿಗೆ ನಿಯಂತ್ರಣ ಹೇರಬೇಕು. ರಾತ್ರಿ 10 ರ ನಂತರ ಸಾಧ್ಯವಾದಷ್ಟು ಸಂಚಾರ ಮೊಟಕುಗೊಳಿಸಬೇಕು ಎಂದು ಸಿಎಂ ಹೇಳಿದರು.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries