ಕಾಸರಗೋಡು: ರಾಜ್ಯದ 10 ಸಾವಿರ ಸರಕಾರಿ ಕಚೇರಿಗಳಲ್ಲಿ ಹಸುರು ಸಂಹಿತೆ ಜಾರಿಗೊಳ್ಳಲಿದ್ದು, ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಘೋಷಣೆ ನಡೆಸುವರು. ಇಂದು ಬೆಳಗ್ಗೆ 11.30ಕ್ಕೆ ಆನ್ ಲೈನ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ.
ಹರಿತ ಕೇರಳಂ ಮಿಷನ್ , ಶುಚಿತ್ವ ಮಿಷನ್, ಕಿಲಾ ಸಂಸ್ಥೆಗಳ ಅಧಿಕೃತ ಫೇಸ್ ಬುಕ್ ಪುಟಗಳಲ್ಲಿ ಮತ್ತು ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಈ ಕಾರ್ಯಕ್ರಮ ನೇರಪ್ರಸಾರಗೊಳ್ಳಳಿದೆ.
ಕಾಸರಗೋಡು ಜಿಲ್ಲೆಯ 500 ಕಚೇರಿಗಳು ಇನ್ನು ಮುಂದೆ ಹರಿತ ಆಫೀಸ್ಗಳು: 26ರಂದು ಬಹುಮಾನ ವಿತರಣೆ
ಕಾಸರಗೋಡು, ಜ.25: ಕಾಸರಗೋಡು ಜಿಲ್ಲೆಯಲ್ಲಿ ನಡೆಸಲಾದ ಹಸುರು ಸಂಹಿತೆ ತಪಾಸಣೆಯಲ್ಲಿ 500 ಕಚೇರಿಗಳು ಹರಿತ ಆಫೀಸ್ ಗಳು ಎಂದು ಆಯ್ಕೆಗೊಂಡಿವೆ. ಒಟ್ಟು 800 ಕಚೇರಿಗಳ ತಪಾಸಣೆ ಈ ನಿಟ್ಟಿನಲ್ಲಿ ನಡೆಸಲಾಗಿತ್ತು.
ಜಿಲ್ಲೆಯ ಸರಕಾರಿ ಕಚೇರಿಗಳನ್ನು ಮತ್ತು ಶಿಕ್ಷಣಾಲಯಗಳಲ್ಲಿ ನಡೆಸಲಾದ ಆಡಿಟಿಂಗ್ ನಲ್ಲಿ ಆರೋಗ್ಯ ಸಮಿತಿ ಅಧ್ಯಕ್ಷರು, ಆರೋಗ್ಯ ಕಾರ್ಯಕರ್ತರು, ಆರ್.ಪಿ.ಗಳು, ಸ್ವಯಂ ಸೇವಕರು ಸೇರಿರುವ 5 ಮಂದಿತ ತಂಡ ನೇತೃತ್ವ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ನೀಡಲಾಗುವ ಬಹುಮಾನಕ್ಕೆ ಈ ಸಾಲಿನಲ್ಲಿ 75 ಸಂಸ್ಥೆಗಳನ್ನು ಆರಿಸಲಾಗಿದೆ.
ಜ.26ರಂದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಅರ್ಹತಾಪತ್ರಗಳ ವಿತರಣೆ ನಡೆಸುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉಪಸ್ಥಿತರಿರುವರು.