ತಿರುವನಂತಪುರ: ರಾಜ್ಯದಲ್ಲಿ ಇನ್ನು ಎದುರಾಗುವ ಗಂಭೀರವಾದ, ಕಾನೂನು ನೆರವು ಬೇಕಾಗುವ ಯಾವುದೇ ಸಮಸ್ಯೆಗಳಿಗೆ ಜನಸಾಮಾನ್ಯರು ಗಾಬರಿಗೊಳ್ಳುವ ಅಗತ್ಯವಿರಲಾರದು. ಕಾರಣ 1 1 2 ಎಂಬ ಸಂಖ್ಯೆಗೆ ಕರೆಮಾಡಿದ 11 ನಿಮಿಷಗಳಲ್ಲಿ ಪೋಲೀಸ್ ಅಗತ್ಯದ ನೆರವಿನ ಹಸ್ತ ನೀಡುವರು ಎಂದು ಡಿಜಿಪಿ ಲೋಕನಾಥ ಬೆಹ್ರಾ ಹೇಳಿರುವರು.
ರೋಟರಿ ಕ್ಲಬ್ ಆಫ್ ಟೆಕ್ನೋಪಾರ್ಕ್ 1 1 2 ರ ಚಟುವಟಿಕೆಗಳನ್ನು ಸಂಘಟಿಸುವ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆಯಲ್ಲಿ ಪೋಲೀಸ್ ಪ್ರಧಾನ ಕಚೇರಿಯಲ್ಲಿ ಪೆÇಲೀಸ್ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ನೀಡಿದ ಬಳಿಕ ನಡೆದ ಸಮಾರಂಭದಲ್ಲಿ ಬೆಹ್ರಾ ಈ ಬಗ್ಗೆ ವಿವರಗಳನ್ನು ನೀಡಿದರು.
ನೀವು ರಾಜ್ಯದ ಎಲ್ಲಿಂದಲಾದರೂ ಈ ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಪೋಲೀಸ್ ಪ್ರಧಾನ ಕಚೇರಿಯ ನಿಯಂತ್ರಣ ಕೊಠಡಿಯಲ್ಲಿ ಸಂದೇಶಗಳು ತಲಪುತ್ತವೆ. ಕಂಟ್ರೋಲ್ ರೂಮ್ ವಾಹನಗಳಿಗೆ ಈ ಕೇಂದ್ರದಿಂದ ದೂರು ಬಂದಲ್ಲಿಗೆ ತೆರಳಲು ಸೂಚನೆ ನೀಡಲಾಗುವುದು.
ತುರ್ತು ಪ್ರತಿಕ್ರಿಗೆ ಉಸ್ತುವಾರಿ ಇನ್ಸ್‍ಪೆಕ್ಟರ್ ಬಿ.ಎಸ್.ಸಾಬು, ಸಬ್ ಇನ್ಸ್‍ಪೆಕ್ಟರ್ ಗಳಾದ ಜೆ.ಸಂತೋಷ್ ಕುಮಾರ್ ಮತ್ತು ಆರ್.ವಿನೋದ್ ಮತ್ತು ಸಿವಿಲ್ ಪೋಲೀಸ್ ಅಧಿಕಾರಿಗಳು ಬಿ.ಎಸ್ ಅಹುಲ್ ಚಂದ್ರನ್, ಯು ಅಭಿಲಾಶ್, ಪೋಲೀಸ್ ಕಂಟ್ರೋಲ್ ರೂಮ್ ವಾಹನದಲ್ಲಿ ಸಬ್ ಇನ್ಸ್‍ಪೆಕ್ಟರ್ ಒ.ಕೆ. ಸುರೇಶ್ ಬಾಬು ಎಂಬವರಿಗೆ ಪ್ರಶಸ್ತಿ ಪ್ರದಾನಮಾಡಲಾಯಿತು.