ಕಾಸರಗೋಡು: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 113.3. ಕೋಟಿ ರೂ. ವೆಚ್ಚದ ಸಮಗ್ರ ಜಲಸಂರಕ್ಷಣೆ ಯೋಜನೆ ಇಂದು ಉದ್ಘಾಟನೆಗೊಳ್ಳಲಿದೆ.
ಮಧ್ಯಾಹ್ನ 3 ಗಂಟೆಗೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಯೋಜನೆಗೆ ಚಾಲನೆ ನೀಡುವರು. ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಕೆ.ಕುಂuಟಿಜeಜಿiಟಿeಜರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅರ್ಧಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮುಖ್ಯ ಅತಿಥಿಯಾಗಿರುವರು. ನಗರಸಭೆ, ಬ್ಲೋಕ್ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿರುವರು.
ಚೆಕ್ ಡಾಂ ಗಳು, ವಿ.ಸಿ.ಬಿ.ಗಳು, ಮಣ್ಣು-ಜಲ ಸಂರಕ್ಷಣೆ ಚಟುವಟಿಕೆಗಳು, ನದಿಗಳ ಪುನಶ್ಚೇತನ ಯೋಜನೆಗಳು, ನೂತನ ರಬ್ಬರ್ ಚೆಕ್ ಡಾಂ ಗಳು ಇತ್ಯಾದಿಗಳು ಈ ಯೋಜನೆಯ ಅಂಗವಾಗಿ ಜಾರಿಗೊಳ್ಳಲಿವೆ. ಜಿಲ್ಲೆಯ ವಿವಿಧೆಡೆ ಜಾರಿಗೊಳಿಸಿರುವ ಚಟುವಟಿಕೆಗಳ ಉದ್ಘಾಟನೆ, ಆಡಳಿತೆ ಮಂಜೂರಾತಿ ಲಭಿಸಿರುವ ಟೆಂಡರ್ ಕ್ರಮಗಳು ಪೂರ್ಣಗೊಂಡಿರುವ ಯೋಜನೆಗಳ ಘೋಷಣೆ ಇತ್ಯಾದಿಗಳು ನಡೆಯಲಿವೆ.
11.39 ಕೋಟಿ ರೂ. ನ 14 ಯೋಜನೆಗಳ ಉದ್ಘಾಟನೆ, 20.29 ಕೋಟಿ ರೂ.ನ ಯೋಜನೆಗಳ ಚಟುವಟಿಕೆಗಳ ಉದ್ಘಾಟನೆ ಜರಗಲಿದೆ.