HEALTH TIPS

ಮಧ್ಯಪ್ರದೇಶ: ನಕಲಿ ಮದ್ಯ ಸೇವಿಸಿ 11 ಮಂದಿ ಸಾವು

       ಭೋಪಾಲ್‌: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಸೋಮವಾರ ನಕಲಿ ಮದ್ಯ ಸೇವಿಸಿ 11 ಮಂದಿ ಮೃತಪಟ್ಟಿದ್ದು, 8 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

       'ಕೆಲವು ಗ್ರಾಮಸ್ಥರು ಬಿಳಿ ಬಣ್ಣದ ಮದ್ಯ ಸೇವಿಸಿದ್ದಾರೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ' ಎಂದು ಮೊರೆನಾದ ವರಿಷ್ಠ ಪೊಲೀಸ್‌ ಅಧಿಕಾರಿ ಅನುರಾಗ್‌ ಸುಜಾನಿಯಾ ಅವರು ಹೇಳಿದರು.

       'ನಕಲಿ ಮದ್ಯ ಸೇವನೆಯಿಂದಾಗಿ ಮನ್ಪುರ ಮತ್ತು ಪಹಾವಲಿ ಗ್ರಾಮದ 11 ಮಂದಿ ಸಾವಿಗೀಡಾಗಿದ್ದಾರೆ' ಎಂಬ ಶಂಕೆಯಿದೆ ಎಂದು ಅವರು ತಿಳಿಸಿದರು.

      'ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿ ಬಂದ ಮೇಲೆಯೇ ಸಾವಿನ ನಿಖರ ಕಾರಣ ತಿಳಿಯಲಿದೆ' ಎಂದು ಅಧಿಕಾರಿಗಳು ಹೇಳಿದರು.

      'ನಕಲಿ ಮದ್ಯ ಸೇವಿಸಿ ಜನರು ಮೃತಪಟ್ಟಿದ್ದಾರೆ ಎಂಬ ವಿಷಯ ಬಹಳ ಬೇಸರವನ್ನುಂಟು ಮಾಡಿದೆ. ಈ ಪ್ರಕರಣ ಸಂಬಂಧ ನಿರ್ಲಕ್ಷ್ಯ ತೋರಿದ ಕೆಲ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಬೇರೆ ತಂಡವನ್ನು ರಚಿಸಲಾಗಿದೆ' ಎಂದು ರಾಜ್ಯ ಗೃಹ ಸಚಿವ ನರೋತ್ತಮ್‌ ಮಿಶ್ರಾ ಅವರು ಮಾಹಿತಿ ನೀಡಿದರು.

      ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ನಾಯಕ ಕಮಲ್‌ನಾಥ್ ಅವರು,' ರಾಜ್ಯದಲ್ಲಿ ನಕಲಿಮದ್ಯ ಮಾಫಿಯಾ ಬಹಳ ಹಾನಿಯನ್ನುಂಟು ಮಾಡುತ್ತಿದೆ. ಈ ಹಿಂದೆ ಉಜ್ಜೈನಿಯಲ್ಲಿ 16 ಜನರು ಮೃತಪಟ್ಟಿದ್ದರು. ಈಗ ಮೊರೆನಾದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಶಿವರಾಜ್‌ ಅವರೇ ಈ ರೀತಿ ಎಲ್ಲಿಯವರೆಗೆ ನಕಲಿ ಮದ್ಯ, ಜನರನ್ನು ಬಲಿ ಪಡೆಯುತ್ತದೆ' ಎಂದು ಅವರು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries