ಕಾಸರಗೋಡು: ಫ್ಯಾಷನ್ ಗೋಲ್ಡ್ ಹೂಡಿಕೆ ವಂಚನೆ ಪ್ರಕರಣದಲ್ಲಿ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ರಿಗೆ ಗುರುವಾರವೂ ಕಾಸರಗೋಡು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 11 ಪ್ರಕರಣಗಳಿಗೆ ಜಾಮೀನು ನೀಡಿದೆ. ಈ ಮೂಲಕ ಈವರೆಗೆ 37 ಪ್ರಕರಣಗಳಲ್ಲಿ ಜಾಮೀನು ಲಭ್ಯವಾದಂತಾಗಿದೆ.
ಆದಾಗ್ಯೂ, ಇತರ ಪ್ರಕರಣಗಳು ಇರುವುದರಿಂದ ಅವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಈ ಮೊದಲು ಮೂರು ಪ್ರಕರಣಗಳಲ್ಲಿ ಹೈಕೋರ್ಟ್ ಜಾಮೀನು ನೀಡಿದ ಬಳಿಕ ಇತರ ಹೆಚ್ಚಿನ ಪ್ರಕರಣಗಳಲ್ಲಿ ಜಾಮೀನು ನೀಡಲು ಅರ್ಜಿ ಸಲ್ಲಿಸಲು ಖಮರುದ್ದೀನ್ ನಿರ್ಧರಿಸಿದ್ದಾರೆ.
ಕಮರುದ್ದೀನ್ ಅವರ ಆರೋಗ್ಯ ಸ್ಥಿತಿ ಮತ್ತು ಇತರ ಪ್ರಕರಣಗಳಲ್ಲಿ ನೇರ ಭಾಗಿಯಾಗಿರದೆ ಪ್ರತಿವಾದಿಯಲ್ಲದ ಆಧಾರದ ಮೇಲೆ ಹೈಕೋರ್ಟ್ ಜಾಮೀನು ನೀಡಿದೆ. ಹೂಡಿಕೆ ವಂಚನೆಗಾಗಿ ಈ ಹಿಂದೆ ಶಾಸಕರ ವಿರುದ್ಧ 149 ಪ್ರಕರಣಗಳು ದಾಖಲಾಗಿತ್ತು.