ಕೊಚ್ಚಿ: ಕೋವಿಡ್ ನಿಂದಾಗಿ ವಾರ್ಷಿಕ ಚಿನ್ನದ ಗ್ರಾಹಕರಲ್ಲಿ ತೀವ್ರ ಕುಸಿತ ಕಂಡಿದ್ದು 2020 ರ ಚಿನ್ನದ ಬೇಡಿಕೆ 3,759.6 ಟನ್‍ಗಳಿಗೆ ತಳ್ಳಿದ್ದು, ಈ ಹಿಂದಿನ ವóಕ್ಕೆ ಹೋಲಿಸಿದರೆ ಶೇಕಡಾ 14 ರಷ್ಟು ಕಡಿಮೆಯಾಗಿದೆ. ವಿಶ್ವ ಚಿನ್ನದ ಮಂಡಳಿಯ ವರದಿಯ ಪ್ರಕಾರ, 2009 ರ ನಂತರ ಮೊದಲ ಬಾರಿಗೆ ಬೇಡಿಕೆ 4,000 ಟನ್‍ಗಿಂತ ಕಡಿಮೆಯಾಗಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಶೇಕಡಾ 28 ರಷ್ಟು ಕುಸಿದು 783.4 ಟನ್‍ಗೆ ತಲುಪಿತ್ತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ 2008 ರ ಎರಡನೇ ತ್ರೈಮಾಸಿಕದ ನಂತರದ ಅತೀ ಸಂಕಷ್ಟದ ತ್ರೈಮಾಸಿಕ ಕುಸಿತ ಇದಾಗಿದೆ.
ಚಿನ್ನದ ಆಭರಣಗಳ ಬೇಡಿಕೆ ನಾಲ್ಕನೇ ತ್ರೈಮಾಸಿಕದಲ್ಲಿ ವರ್ಷಕ್ಕೆ ಶೇ 13 ರಷ್ಟು ಕುಸಿದು 515.9 ಟನ್‍ಗೆ ತಲುಪಿದೆ. ಇದು ಪೂರ್ಣ ವರ್ಷಕ್ಕೆ 1,411.6 ಟನ್ ಆಗಿತ್ತು. 2019 ಕ್ಕೆ ಹೋಲಿಸಿದರೆ, ಶೇಕಡಾ 34 ರಷ್ಟು ಕುಸಿತ ಕಂಡಿದೆ.
ಹೂಡಿಕೆಯ ಬೇಡಿಕೆ ಶೇಕಡಾ 40 ರಷ್ಟು ಹೆಚ್ಚಳಗೊಂಡು 1,773.2 ಟನ್‍ಗಳಿಗೆ ತಲುಪಿದೆ. ಇದು ಮುಖ್ಯವಾಗಿ ಚಿನ್ನದ ಇಟಿಎಫ್ ಗಳ ಬೆಂಬಲದಿಂದಾಗಿ. ನಾಲ್ಕನೇ ತ್ರೈಮಾಸಿಕದಲ್ಲಿ ಚಿನ್ನದ ಇಟಿಎಫ್‍ಗಳ ಹೂಡಿಕೆಯ ಬೇಡಿಕೆ ಗಮನಾರ್ಹವಾಗಿ ಕುಸಿದಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ಚಿನ್ನದ ಸರಳುಗಳು ಮತ್ತು ನಾಣ್ಯಗಳು ಶೇಕಡಾ 10 ರಷ್ಟು ಹೆಚ್ಚಾಗಿದೆ. 2020 ರ ದ್ವಿತೀಯಾರ್ಧದಲ್ಲಿ ಭಾರತ ಮತ್ತು ಚೀನಾದಲ್ಲಿ ಒಂದಷ್ಟು ಚೇತರಿಕೆ ಕಂಡುಬಂದಿದೆ.
ಚಿನ್ನದ ಒಟ್ಟು ವಾರ್ಷಿಕ ಪೂರೈಕೆ ಶೇಕಡಾ 4 ರಷ್ಟು ಇಳಿದು 4,633 ಟನ್‍ಗಳಿಗೆ ತಲುಪಿದೆ. ಇದು 2013 ರ ನಂತರದ ಅತಿದೊಡ್ಡ ಕುಸಿತವಾಗಿದೆ. ಕರೋನಾ ವೈರಸ್‍ನಿಂದ ಉಂಟಾದ ಗಣಿಗಳಲ್ಲಿನ ಉತ್ಪಾದನಾ ಅಡೆತಡೆಯೇ ಇದಕ್ಕೆ ಕಾರಣ.