ಸೂರತ್: ಗುಜರಾತ್'ನ ಸೂರತ್ ನಗರದ ಕೊಸಂಬಾದಲ್ಲಿ ಭೀಕರ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಟ್ರಕ್ ವೊಂದು ಇದ್ದಕ್ಕಿದ್ದಂತೆ ಪಾದಚಾರಿ ಮಾರ್ಗಕ್ಕೆ ನುಗ್ಗಿದ್ದು, ಘಟನೆಯಲ್ಲಿ 13 ಮಂದಿ ಕಾರ್ಮಿಕರು ದುರ್ಮರಣವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಇಂದು ಬೆಳಗಿನ ಜಾವ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ್ದ ಟ್ರಕ್ ಇದ್ದಕ್ಕಿದ್ದಂತೆ ಪಾದಚಾರಿ ಮಾರ್ಗಕ್ಕೆ ನುಗ್ಗಿದೆ.
ದುರ್ಘಟನೆ ಸಂಭವಿಸುವ ವೇಳೆ ಪಾದಚಾರಿ ಮಾರ್ಗದಲ್ಲಿ ಕಾರ್ಮಿಕರು ಮಲಗಿದ್ದರೆಂದು ಹೇಳಲಾಗುತ್ತಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಾವನ್ನಪ್ಪಿದ್ದ ಎಲ್ಲರೂ ಕಾರ್ಮಿಕರಾಗಿದ್ದು, ರಾಜಸ್ಥಾನ ಮೂಲದವರಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.