ತಿರುವನಂತಪುರ: ರಾಜ್ಯದಾದ್ಯಂತ 133 ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ವಿತರಿಸಲಾಗುವುದು. ಎರ್ನಾಕುಳಂನಲ್ಲಿ 12, ತಿರುವನಂತಪುರ ಮತ್ತು ಕೋಝಿಕ್ಕೋಡ್ ನಲ್ಲಿ 11 ಮತ್ತು ಇತರ ಜಿಲ್ಲೆಗಳಲ್ಲಿ ಒಂದೊಂದು ಕೇಂದ್ರಗಳಲ್ಲಿ ವಿತರಣೆ ನಡೆಯಲಿದೆ. ಕೋವಿಡ್ ಲಸಿಕೆ ವಿತರಣೆ ಪ್ರಾರಂಭವಾಗುವ ಈ ತಿಂಗಳ 16 ರಿಂದ ರಾಜ್ಯದಲ್ಲಿ 13,300 ಜನರಿಗೆ ಲಸಿಕೆ ನೀಡಲಾಗುವುದು. ಪ್ರಸ್ತುತ ಒಂದೊಂದು ಕೇಂದ್ರಗಳಲ್ಲೂ ನೂರು ಮಂದಿಗೆ ಮೊದಲ ಹಂತದ ಲಸಿಕೆ ವಿತರಣೆ ನಡೆಸಲು ತೀರ್ಮಾಲಾಗಿದೆ.
ಈವರೆಗೆ ರಾಜ್ಯದಲ್ಲಿ 3,54,897 ಜನರು ಲಸಿಕೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಲಸಿಕೆ ನೀಡಲಾಗುವುದು. ತಮ್ಮ ಮೊಬೈಲ್ ಪೋನ್ ನಲ್ಲಿ ಲಸಿಕೆ ಪಡೆಯಲು ದಿನಗಳು ಮತ್ತು ಸಮಯಗಳ ಎಸ್‍ಎಂಎಸ್ ಸಂದೇಶ ರವಾನೆಯಾಗುವುದು. ಲಸಿಕೆ ಕೇಂದ್ರದಲ್ಲಿ ವೈದ್ಯರು ಸೇರಿದಂತೆ ಐವರು ಆರೋಗ್ಯ ಕಾರ್ಯಕರ್ತರು ಇರಲಿದ್ದಾರೆ. ಲಸಿಕೆ ಕೈಯಲ್ಲಿ ಪಡೆಯಲು ಪ್ರತಿ ವ್ಯಕ್ತಿಗೆ ಸುಮಾರು ಐದು ನಿಮಿಷಗಳು ಬೇಕಾಗುತ್ತದೆ.
ವ್ಯಾಕ್ಸಿನೇಷನ್ ನಂತರ 30 ನಿಮಿಷಗಳ ಕಾಲ ಅವರನ್ನು ನಿರೀಕ್ಷಿಸಲಾಗುತ್ತದೆ. ಪ್ರತಿ ವ್ಯಕ್ತಿಗೆ ಒಂದು ಲಸಿಕೆಯ ಎರಡು ಚುಚ್ಚುಮದ್ದು ನೀಡಲಾಗುತ್ತದೆ. ಮೊದಲ ಚುಚ್ಚುಮದ್ದಿನ ನಾಲ್ಕು ವಾರಗಳ ನಂತರ ಎರಡನೇ ಚುಚ್ಚುಮದ್ದನ್ನು ನೀಡಲಾಗುತ್ತದೆ.