ಬದಿಯಡ್ಕ: ಬಳ್ಳಪದವು ವೀಣಾವಾದಿನಿ ಸಂಗೀತ ಶಾಲೆ ನಿರ್ಮಿಸಿರುವ ಭಾವಬಿಂದು-ಸುಂದರ ಕೇರಳ ವೀಡಿಯೋ ಆಲ್ಬಮ್ ಬಿಡುಗಡೆ ಸಮಾರಂಭವು ಜ.14 ರಂದು ಶ್ರೀಮದ್ ಎಡನೀರು ಮಠದ ಆವರಣದಲ್ಲಿ ನಡೆಯಲಿದೆ.
ರಾತ್ರಿ 8ಕ್ಕೆ ನಡೆಯಲಿರುವ ಸಮಾರಂಭವನ್ನು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಬಿಡುಗಡೆಗೊಳಿಸಿ ಆಶೀರ್ವಚನ ನೀಡುವರು. ವಿದ್ವಾಂಸ, ಧಾರ್ಮಿಕ ಚಿಂತಕ ವಿದ್ವಾನ್.ಪಂಜ ಭಾಸ್ಕರ ಭಟ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಶ್ರೀಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಉಪಸ್ಥಿತರಿರುವರು.
ಆರಂಭದಲ್ಲಿ ಸಂಜೆ 6.30 ರಿಂದ ಗಾನ ಮಾಧುರ್ಯ ಸಂಗೀತ ಕಚೇರಿ ನಡೆಯಲಿದ್ದು ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು ಹಾಗೂ ವೀಣಾ ವಾದಿನಿ ತಂಡ ಹಾಡುಗಾರಿಕೆ ನಡೆಸುವರು. ಜಯಪ್ರಕಾಶ್ ಚೆಂಗನಶ್ಚೇರಿ(ಹಾರ್ಮೋನಿಯಂ), ವೈಕ್ಕಂ ಪ್ರಸಾದ್(ಮೃದಂಗಂ), ರತ್ನಶ್ರೀ ಅಯ್ಯರ್(ತಬ್ಲಾ)ದಲ್ಲಿ ಸಾಥ್ ನೀಡುವರು.
ವೀಣಾವಾದಿನಿಯ ನಿರ್ದೇಶಕ ವಿದ್ವಾನ್.ಯೋಗೀಶ ಶರ್ಮ ಬಳ್ಳಪದವು ಮತ್ತು ಶಿಷ್ಯವೃಂದದವರು ಹಾಡಿರುವ ವೀಡಿಯೋ ಅವತರಣಿಕೆಗೆ ಅಮೃತಾ ಓಟೆಕ್ಕಾಡ್ ಸಂಗೀತ ನೀಡಿದ್ದಾರೆ. ಛಾಯಾ ಕುಟೀರ ತಂಡ ಚಿತ್ರೀಕರಣ ನಡೆಸಿದೆ.