ಕೊಚ್ಚಿ: ಕರಿಪುರ ವಿಮಾನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಎರಡು ವರ್ಷದ ಮಗಳಿಗೆ ಏರ್ ಇಂಡಿಯಾ 1.5 ಕೋಟಿ ರೂ. ನಷ್ಟ ಪರಿಹಾರ ನೀಡಲಿದೆ. ಅಪಘಾತದಲ್ಲಿ ಮೃತಪಟ್ಟ ಕುಂದಮಂಗಲಂ ಮೂಲದ ಶರಫುದ್ದೀನ್ ಅವರ ಮಗಳಿಗೆ 1.51 ಕೋಟಿ ರೂ. ನೀಡಲು ಸಿದ್ಧ ಎಂದು ಏರ್ ಇಂಡಿಯಾ ಹೈಕೋರ್ಟ್‍ಗೆ ತಿಳಿಸಿದೆ.
ಶರಫುದ್ದೀನ್ ಅವರ ಪತ್ನಿ ಅಮಿನಾ ಶೆರಿನ್, ಮಗಳು ತಕ್ಷಣ ಪರಿಹಾರ ನೀಡುವಂತೆ ಆಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿದ ಜಸ್ಟೀಸ್ ಎಲ್.ನಗರೇಶ್ ಈ ಆದೇಶ ನೀಡಿದ್ದಾರೆ. ಮೃತರಾದವರ ಪತ್ನಿ ಮತ್ತು ಮಗಳ ನಷ್ಟ ಪರಿಹಾರ ಪೂರ್ಣ ಪ್ರಮಾಣದಲ್ಲಿ ನೀಡಿದ ಬಳಿಕ ಸಂಪೂರ್ಣ ದಾಖಲೆಗಳನ್ನು ಪಡೆದರೆ ಸಾಕೆಮದು ನ್ಯಾಯಾಲಯ ನಿರ್ದೇಶಿಸಿದೆ.
ವಿಮಾನ ಅಪಘಾತಕ್ಕೆ ಒಳಗಾದವರಿಗೆ ಹೆಚ್ಚಿನ ಪರಿಹಾರವನ್ನು ಪಡೆಯಲು ಅರ್ಹರು ಎಂದು ಘೋಷಿಸಬೇಕೆಂದು ಕೋರಿ ಫಿರ್ಯಾದಿಗಳು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಶರಪುದ್ದೀನ್ ಅವರೊಂದಿಗೆ ಅಪಘಾತದ ದಿನ ಜೊತೆಗಿದ್ದ ಪತ್ನಿ ಹಾಗೂ ಪುತ್ರಿಗೆ ಅಪಘಾತದಲ್ಲಿ ಗಂಭೀರ ಗಾಯಗಳಾಗಿ ಬಳಿಕ ಚೇತರಿಸಿದ್ದರು.