ನವದೆಹಲಿ: ಕೋವಿಡ್-19 ಲಸಿಕೆ ವಿತರಣೆ ಕಾರ್ಯಕ್ರಮದ ಎರಡನೇ ದಿನವಾದ ಇಂದು ಆರು ರಾಜ್ಯಗಳಲ್ಲಿ ಒಟ್ಟಾರೇ 17 ಸಾವಿರದ 72 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತಿಳಿಸಿದೆ.
ಕೋವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭವಾದ ನಂತರ ದೇಶಾದ್ಯಂತ ಒಟ್ಟಾರೇ 2 ಲಕ್ಷದ 24 ಸಾವಿರದ 301 ಫಲಾನುಭವಿಗಳು ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಮೊದಲ ದಿನ ದೇಶಾದ್ಯಂತ ಮೂರು ಸಾವಿರ ಕಡೆಗಳಲ್ಲಿ 1 ಲಕ್ಷದ 91 ಸಾವಿರ ಜನರು ಲಸಿಕೆ ಪಡೆದುಕೊಂಡಿದ್ದರು. ಇತರ ಕಾಯಿಲೆಗಳಿಗೆ ರೋಗನಿರೋಧಕ ಲಸಿಕೆ ವೇಳಾಪಟ್ಟಿಯೊಂದಿಗಿನ ಘರ್ಷಣೆಯನ್ನು ತಪ್ಪಿಸಲು ರಾಜ್ಯಗಳ ಸಂಖ್ಯೆಯನ್ನು ಕಡಿಮೆಗೊಳಿಸಲಾಗಿದೆ. ಇದು ಸಾಮಾನ್ಯ ತಂತ್ರವಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಎರಡು ದಿನಗಳಲ್ಲಿ ಲಸಿಕೆ ಪಡೆದ ಮೂವರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ಬಳಿಕ ಇಬ್ಬರು ಬಿಡುಗಡೆಯಾಗಿದ್ದಾರೆ. ಮೂರನೇ ವ್ಯಕ್ತಿಯನ್ನು ರಿಷಿಕೇಶಿಯ ಏಮ್ಸ್ ನಲ್ಲಿ ವೈದ್ಯಕೀಯ ನಿಗಾವಣೆಯಲ್ಲಿ ಇಡಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.