ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಜಿಲ್ಲೆಯ ಎಲ್ಲಾ ಪಂಚಾಯತುಗಳಿಂದ ವಿಜಯಿಗಳಾದ ಮೊಗೇರ ಜನಪ್ರತಿನಿಧಿüಗಳಿಗೆ ಅಭಿನಂದನಾ ಕಾರ್ಯಕ್ರಮ ಜನವರಿ 17 ರಂದು ಭಾನುವಾರ ಬೆಳಗ್ಗೆ 10 ಕ್ಕೆ ಬೇಳ ದರ್ಬೆತ್ತಡ್ಕದಲ್ಲಿರುವ ಧ್ಯಾನಮಂಟಪದಲ್ಲಿ ಜರಗಲಿದೆ. ಅಪರಾಹ್ನ 2 ಕ್ಕೆ ಜಿಲ್ಲಾ ಸಮಿತಿಯ 2021-22 ನೇ ವರ್ಷದ ವಾರ್ಷಿಕ ಮಹಾಸಭೆಯು ಜರಗಲಿದೆ.
ಕಾರ್ಯಕ್ರಮಕ್ಕೆ ಎಲ್ಲಾ ಪಂಚಾಯತು ಮೊಗೇರ ಸಮಿತಿ ಸದಸ್ಯರು ಹಾಗೂ ಕಾಲನಿ ಸಮಿತಿ ಸದಸ್ಯರು ಸಭೆಯಲ್ಲಿ ಹಾಜರಿರಬೇಕಾಗಿ ಜಿಲ್ಲಾ ಅಧ್ಯಕ್ಷ ಬಾಬು ಬಂದ್ಯೋಡು ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.