ಕಾಸರಗೋಡು: ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಆಶ್ರಯದಲ್ಲಿ ಜ.17ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ತನಕ ಬ್ಯಾಂಕ್ ರಸ್ತೆಯಲಿರುವ ವಿನಯ ಮೆಡಿಕಲ್ ಕಟ್ಟಡದ ಮಹಡಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಕಚೇರಿಯಲ್ಲಿ ಶಿಕ್ಷಣ ಉದ್ಯೋಗ ಮಾರ್ಗದರ್ಶನ ತರಗತಿ ನಡೆಯಲಿದೆ.
ತರಗತಿ ಉಚಿತವಾಗಿದ್ದು, ಯಾವುದೇ ಶುಲ್ಕವಿರುವುದಿಲ್ಲ. ಪ್ರಸ್ತುತ ಕೇರಳ ಲೋಕಸೇವಾ ಆಯೋಗ(ಪಿಎಸ್‍ಸಿ) ರಾಜ್ಯದ ವಿವಿಧ ಇಲಾಖೆಗಲ್ಲಿ ಖಾಲಿ ಬಿದ್ದಿರುವ ಲೀಗಲ್ ಅಸಿಸ್ಟೆಂಟ್, ಕೃಷಿ ಅಕಾರಿ, ಟೈಪಿಸ್ಟ್ ಟೀಚರ್, ಕನ್ನಡ ಟ್ರಾನ್ಸ್‍ಲೇಟರ್, ಲೈಬ್ರೇರಿಯನ್ ಮುಂತಾದ ಆನೇ ಹುದ್ದೆಗಳಿಗೆ ಓನ್ ಟೈಮ್ ರಿಜಿಸ್ಟ್ರೇಶನ್ ಮೂಲಕ ಅರ್ಜಿ ಆಹ್ವಾನಿಸಿರುತ್ತಾರೆ. ಪಿಎಸ್‍ಸಿ ಅರ್ಜಿ ಸಲ್ಲಿಸುವ ಕುರಿತು, ಪರೀಕ್ಷೆ, ಸಂದರ್ಶನ, ನೇಮಕಾತಿ ಮುಂತಾದ ವಿಷಯಗಳ ಕುರಿತು ತರಗತಿ ನಡೆಯಲಿರುವುದು. ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ, ಡಿಪೆÇ್ಲೀಮಾ ಆಗಿದ್ದು ಉದ್ಯೋಗಕಾಂಕ್ಷಿಗಳು ಭಾಗವಹಿಸಬಹುದು. ಆಸಕ್ತರು ಗಣೇಶ್ ಪ್ರಸಾದ್ ಪಾಣೂರು 9496237601 ನಂಬ್ರಕ್ಕೆ ಸಂಪರ್ಕಿಸಬಹುದು ಎಂಬುದಾಗಿ ಕಸಾಪ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.