ಕಾಸರಗೋಡು: ಕೇರಳ ರಾಜ್ಯ ಆಹಾರ ಸುರಕ್ಷೆ ಆಯೋಗ ರಾಜ್ಯಾದ್ಯಂತ ಜನಪ್ರತಿನಿಧಿಗಳಿಗಾಗಿ ನಡೆಸಲಿರುವ ಜನಜಾಗೃತಿ ಶಿಬಿರ ಜ.27ರಂದು ಕಾಸರಗೋಡಿನಲ್ಲಿ ಆರಮಭಗೊಳ್ಳಲಿದೆ.
ಆಹಾರ ಸುರಕ್ಷೆ ಜಾರಿಗೊಳಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಹೊಣೆ ಸಂಬಮಧ ಜಾಗೃತಿ ತರಗತಿಗಳು, ಸಾರ್ವಜನಿಕ ಸಂಪರ್ಕ ಕಾರ್ಯಕ್ರಮ ಇತ್ಯಾದಿ ಈ ಶಿಬಿರಗಳ ಅಂಗವಾಗಿ ನಡೆಯಲಿದೆ.
27ರಂದು ಬೆಳಗ್ಗೆ 11 ಗಂಟೆಗೆ ಕಾಸರಗೋಡು ನಗರಸಭೆ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ನಾಗರೀಕ ಪೂರೈಕೆ ಸಚಿವ ಪಿ.ತಿಲೋತ್ತಮನ್ ಅವರು ಶಿಬಿರ ಉದ್ಘಾಟಿಸುವರು. ಆಯೋಗದ ಅಧ್ಯಕ್ಷ ಕೆ.ವಿ.ಮೋಹನ್ ಕುಮಾರ್ ಮತ್ತು ಸದಸ್ಯರು ತರಗತಿ ನಡೆಸುವರು. ಮಧ್ಯಾಹ್ನ 2.30ಕ್ಕೆ ಆಯೋಗ ಅಧ್ಯಕ್ಷ ಭಾಗವಹಿಸುವ ಸಾರ್ವಜನಿಕ ಸಂಪರ್ಕ ನಡೆಯಲಿದೆ.
ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪೂರ್ವಭಾವಿ ಸಭೆ ಜರುಗಿತು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಆಯೋಗ ಸದಸ್ಯರಾದ ಎಂ.ವಿಜಯಲಕ್ಷ್ಮಿ, ವಿ.ರಮೇಶನ್, ಜಿಲ್ಲಾ ನಾಗರೀಕ ಪೂರೈಕೆ ಅಧಿಕಾರಿ ವಿ.ಕೆ.ಶಶಿಧರನ್, ಜಿಲ್ಲಾ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು.