ಕೊಚ್ಚಿ: ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ(ಕುಸಾಟ್) ವಿವಿಧ ವಿಭಾಗಗಳಿಗೆ ನೇಮಕಾತಿಗಾಗಿ ಅಭ್ಯರ್ಥಿಗಳು ಜನವರಿ 18 ರವರೆಗೆ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ.
ಅಪ್ಲೈಡ್ ಕೆಮಿಸ್ಟ್ರಿ, ಅಪ್ಲೈಡ್ ಎಕನಾಮಿಕ್ಸ್, ಫಿಸಿಕಲ್ ಓಷನೊಗ್ರಫಿ, ಪಾಲಿಮರ್ ಸೈನ್ಸ್ ಅಂಡ್ ರಬ್ಬರ್ ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್, ಲೀಗಲ್ ಸ್ಟಡೀಸ್, ಮೆರೈನ್ ಜಿಯಾಲಜಿ ಮತ್ತು ಜಿಯೋಫಿಸಿಕ್ಸ್, ಫೆÇೀಟೊನಿಕ್ಸ್, ಫಿಸಿಕ್ಸ್ ಮತ್ತು ಶಿಪ್ ಟೆಕ್ನಾಲಜಿ ವಿಭಾಗಗಗಳಿಗೆ ನೇಮಕಾತಿ ನಡೆಯಲಿದೆ.
ಅರ್ಜಿಯ ಪ್ರತಿಗಳು ಮತ್ತು ಪೆÇೀಷಕ ದಾಖಲೆಗಳು ಜನವರಿ 25 ರೊಳಗೆ ರಿಜಿಸ್ಟ್ರಾರ್, ಆಡಳಿತ ಕಚೇರಿ, ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ, ಕೊಚ್ಚಿ 682022 ಗೆ ತಲುಪಬೇಕು. ಅರ್ಜಿ ನಮೂನೆ ಮತ್ತು ವಿವರಗಳು www.cusat.ac.in ನಲ್ಲಿ ಲಭ್ಯವಿದೆ.